ನಾಲ್ವಡಿ ಅವರಿಗೆ ಅಗೌರವ ತರುವಂತಹ ಮಾತನಾಡಿಲ್ಲ

HC-Mahadevappa
Published on

ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ನಾಲ್ವಡಿ ಅವರಿಗೆ ಅಗೌರವ ತರುವಂತಹ ಮಾತನಾಡಿಲ್ಲ. ಕೆಆರ್‌ಎಸ್‌ಗೆ ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂದು ಹೇಳಿದ್ದಾರೆ. ಇದರಲ್ಲಿ ಮುಸ್ಲಂ ಓಲೈಕೆಗಾಗಿ ಹೇಳಿದ್ದಾರೆ ಎನ್ನುವ ಮಾತುಗಳನ್ನು ಟೀಕಿಸುವವರು ನಿಲ್ಲಿಸಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು.

ಟಿಪ್ಪು ಅಡಿಗಲ್ಲು ಹಾಕಿದ್ದಾರೆ ಎಂದು ಅವರ ಸಾಧನೆ ಬಗ್ಗೆ ಹೇಳಿದ್ದಾರೆ ಅದನ್ನು ಒಪ್ಪಿಕೊಳ್ಳಬೇಕು. ಆದರೆ, ನಾಲ್ವಡಿ ಯವರಿಗೆ ಅಗೌರವ ಅಂತ ಮಾತನಾಡಿಲ್ಲ.1911ರಲ್ಲಿ ನಾಲ್ವಡಿ ರವರು ಆಣೆಕಟ್ಟು ಕಟ್ಟಲು ಗುದ್ದಲಿ ಪೂಜೆ ಮಾಡಲು ಹೋದಾಗ ಟಿಪ್ಪುವಿನ ಕಲ್ಲು ಸಿಕ್ಕಾಗ ಅದನ್ನು ಎತ್ತಿ ಬಿಸಾಕಲಿಲ್ಲ.ಅದನ್ನು ಕೂಡ ಸ್ಥಾಪನೆ ಮಾಡಿದರು, ಪ್ರವೇಶದ್ವಾರದ ಗೇಟ್ ನಲ್ಲಿ ಈಗಲೂ ಇದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟಿಪ್ಪು ರವರಿಗೆ ಅಣೆಕಟ್ಟೆ ಕಟ್ಟಲು ಯೋಜನೆ ಹಾಕಿದ್ದರು.ಆದರೆ ಆಗಲಿಲ್ಲ ಅದನ್ನು ನಾಲ್ವಡಿ ರವರು ಮಾಡಿದ್ದಾರೆ.ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟಿದ್ದು ದಲಿತ ಸಮಾಜ ಹಾಗೂ ಮಹದೇವಪ್ಪ ಅವರು, ಇವರು ನಾಲ್ವಡಿ ಹಾಗೂ ರಾಜಮನೆತನದವರ ವಿರುದ್ಧ ಮಾತನಾಡಿಲ್ಲ ಎಂದರು.

ಜಾತಿ ಗಣತಿ ವರದಿಯಲ್ಲಿ ಎಡಗೈ ಸಮುದಾಯ ಶೇ.6, ಬಲಗೈ ಸಮುದಾಯ ಶೇ.5 ಅಂತ ನಾಗಮೋಹನದಾಸ್ ವರದಿ ನೀಡಿದೆ ಎನ್ನಲಾಗಿದೆ. ಆದರೆ, ಸರಿಯಾಗಿ ಸಮೀಕ್ಷೆ ಆಗಿಲ್ಲ. ಅಂಕಿ ಅಂಶಗಳು ಪುನರ ಪರಿಶೀಲನೆ ಆಗಬೇಕು. ಬಲಗೈ ಜನಾಂಗ ಇನ್ನೂ ನೋಂದಣಿ ಮಾಡಿಕೊಂಡಿಲ್ಲ.ವರದಿಯೇ ಅಂತಿಮ ಅಲ್ಲ.ಚರ್ಚೆ ಆಗಬೇಕು. ಈ ವರದಿಯನ್ನು ತಡೆ ಹಿಡಿಯಬೇಕು. ಜನಸಂಖ್ಯೆ ಅನುಗುಣವಾಗಿ ಕೊಡಬೇಕು, ಇಲ್ಲವಾದರೆ ಬಹಿರಂಗವಾಗಿ ಜನರ ಬಳಿಗೆ ಹೋಗಬೇಕಾಗುತ್ತೆ ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ್ರೊ.ಕೆ .ಎಸ್.ಭಗವಾನ್ ಮಾತನಾಡಿ, ಡಾ.ಎಚ್.ಸಿ.ಮಹದೇವಪ್ಪ ಮುಖ್ಯಮಂತ್ರಿ ಆಗಲು ಅರ್ಹರಿದ್ದಾರೆ. ಅಂತ ವ್ಯಕ್ತಿ ಏನೇನೋ ಮಾತನಾಡಲು ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net