ನಾರಾಯಣಗುರುಗಳ ವಿಚಾರ ಧಾರೆಗಳನ್ನು ಪಠ್ಯದಲ್ಲಿ ಅಳವಡಿಸ ಬೇಕು,ಶಾಸಕ

CTD 31 NARYANA GURU--002
Published on


ಚಿತ್ರದುರ್ಗ:ಕೇರಳದ ಬಸವಣ್ಣ ಎಂಬ ಖ್ಯಾತಿಯ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನವನ್ನು ಸಮಾಜಕ್ಕಾಗಿ ಮುಡಿಪಾಗಿಟ್ಟಿದ್ದವರೆಂ ದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ನಗರದ ಆರ್ಯ ಈಡಿಗರ ವಿದ್ಯಾರ್ಥಿನಿಲಯದಲ್ಲಿ ಗುರುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದೇ ಜಾತಿ,ಮತ,ದೇವರೆಂಬ ನಾರಾಯಣ ಗುರುಗಳ ಮಾತನ್ನು ನಾವೆಲ್ಲರೂ ಪಾಲಿಸಬೇಕಿದೆ. ಶೋಷಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು,ಹೆಣ್ಣು ಮಕ್ಕಳಿಗೆ ವಿಧಿಸಿದ್ದ ನಿಬಂಧನೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸಿದ್ದ ನಾರಾಯಣ ಗುರುಗಳು,ಮಾನವ ಕುಲ ಒಂದೇ ಎಂಬ ಸಿದ್ಧಾಂತವನ್ನು ಸಮಾಜಕ್ಕೆ ನೀಡಿದರು. ಇಂತಹ ಮಹನೀಯರ ವಿಚಾರಧಾರೆಗಳನ್ನು ಪಠ್ಯದಲ್ಲಿ ಅಳವಡಿಸ ಬೇಕಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ,ಮಹನೀಯರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಬಾರದು. ನಾ ರಾಯಣ ಗುರುಗಳ ವಿಚಾರಧಾರೆಗಳನ್ನು ಎಲ್ಲರೂ ಅಳವಡಿಸಿಕೊಳ್ಳ ಬೇಕಿದೆ. ಅವರು ಮೌನಕ್ರಾಂತಿಯ ಮೂಲಕ ಸಮಾಜದ ಪರಿ ವರ್ತನೆಗೆ ಕಾರಣರಾಗಿದ್ದಾರೆ. ನಾರಾಯಣ ಗುರುಗಳು ಯೋಗ,ಜ್ಞಾನ,ಮಾನವೀಯತೆ ಮೇರು ವ್ಯಕ್ತಿತ್ವದವರು. ಸಾಮಾನ್ಯ ಮನುಷ್ಯ ರಾಗಿ ಜನ್ಮತಾಳಿ,ಸಂತ ಪದವಿಗೇರಿದವರು. ಅವರ ತತ್ವಾದರ್ಶ,ವಿಚಾರಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೂ ತಿಳಿಸ ಬೇಕೆಂದರು.
ಎಸ್‌ಆರ್‌ಎಸ್ ಪಿಯು ಕಾಲೇಜು ಪ್ರಾಂಶುಪಾಲ ಇ.ಗಂಗಾಧರ್ ಉಪನ್ಯಾಸ ನೀಡಿದರು. ನಾರಾಯಣಗುರುಗಳು ಸಾಮಾಜಿಕ ಕಾ ಳಜಿಯುಳ್ಳವರಾಗಿದ್ದವರು. ತಾರತಮ್ಯನೀತಿ, ಮೂಢನಂಬಿಕೆ,ಅಸಮಾನತೆ ಮೊದಲಾದ ಸಾಮಾಜಿಕ ಪಿಡುಗಗಳ ವಿರುದ್ಧ ಧ್ವನಿ ಎತ್ತಿದ್ದ ರು. ಶೋಷಣೆ ವಿರುದ್ಧ ಹಲವು ಹೋರಾಟಗಳನ್ನು ನಡೆಸಿದ್ದರೆಂದರು. ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾ ರ್ಥಿನಿ ಆರ್.ದಿಶಾ ಅವರನ್ನು ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,ಆರ್ಯ ಈಡಿಗರ ಸಮಾಜದ ಜಿಲ್ಲಾಧ್ಯಕ್ಷ ಎಚ್. ಜೀವನ್,ಕಾರ‌್ಯದರ್ಶಿ ಟಿ.ಮಂಜುನಾಥ್,ತಾಲೂಕು ಅಧ್ಯಕ್ಷರಾದ ಆರ್.ಶ್ರೀನಿವಾಸ್,ರವಿಕುಮಾರ್, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ವೆಂ ಕಟೇಶ್ ಮತ್ತಿತರ ಸಮಾಜದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net