

ಯಾದಗಿರಿ: ವಿದ್ಯಾರ್ಥಿ ಸಮುದಾಯಕ್ಕೆ ಧ್ವನಿ ನೀಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವಿದ್ಯಾಥರ್ಿ ಘಟಕವಾದ ಎನ್ಎಸ್ಯುಐ ಸ್ಥಾಪನೆ ಮಾಡಿದೆ ಎಂದು ಪ್ರಧಾನ ಕಾರ್ಯದರ್ಶಿ ಸಂಜಯಕುಮಾರ ಕೌಲಿ ತಿಳಿಸಿದರು.
ಭಾನುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಒಕ್ಕೂಟ (ಎನ್ಎಸ್ಯುಐ)ಸಂಸ್ಥಾಪನಾ ದಿನವನ್ನು ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿದಿಸೆಯಿಂದಲೇ ಯುವಕರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರಿಂದ ಭವಿಷ್ಯದಲ್ಲಿ ಅವರು ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬ ದೃಢವಾದ ನಂಬಿಕೆ ನಮ್ಮ ಪಕ್ಷದ್ದಾಗಿದೆ ಎಂದರು.
ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಮಾಣಿಕರಡ್ಡಿ ಕುರಕುಂದಿ ಮಾತನಾಡಿ, ದೇಶದ ಸ್ವಾತಂತ್ರ್ಯ ಚಳುವಳಯಲ್ಲಿ ಸಕ್ರೀಯವಾಗಿದ್ದ ಕಾಂಗ್ರೆಸ್ ಸ್ವಾತಂತ್ರ್ಯದ ನಂತರ ಭಾರತವನ್ನು ಸಂಪೂರ್ಣ ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದೆ. ಎನ್ಎಸ್ಯುಐ ಸ್ಥಾಪನೆ ಮೂಲಕ ಅಸಂಖ್ಯ ಯುವಕರಿಗೆ ಆದರ್ಶ ಹಾಗೂ ರಾಜಕೀಯ ಸಿದ್ಧಾಂತವನ್ನು ಬಿತ್ತರಿಸುತ್ತಿದೆ ಎಂದು ಹೇಳಿದರು.
ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನೇಶ ದೊಡ್ಡಮನಿ ಧ್ವಜಾರೋಹಣ ನೆರವೇರಿಸಿದರು. ನಿರಂಜನ ರಾಠೋಡ, ಪವನಗೌಡ,ಕುಮಾರ ತಳಿಗೇರಿ, ಅಕ್ಬರ್ ಬೆಂಡೆಬೆಂಬಳಿ, ಹಣಮಂತ ಚವ್ಹಾಣ, ಬಸವರಾಜ ನಾಟೇಕರ್ ಕುರಕುಂದಿ, ಶಿವು ಡಿಕೆ ಮುಂಡರಗಿ, ಶರಣು ಕುರಿ ವಡಗೇರಿ, ಸಿದ್ದು ಕಂದಳ್ಳಿ, ಶರಣು ಬೀರನಾಳ, ಮಲ್ಲಿಕಾಜರ್ುನ ಹತ್ತಿಕುಣಿ, ಶರಣು ಕಾಡಂಗೇರಿ, ಸೋಮು ಆಶನಾಳ, ಮಹೇಶ ನಾಯಕ ವರ್ಕನಳ್ಳಿ ಇದ್ದರು.