ನಾಣಿಕಟ್ಟಾದಲ್ಲಿ ಪೋಕ್ಸೋ ಅರಿವು ಕಾರ್ಯಕ್ರಮ

Published on

ಫೋಟೋ 7ಎಸ್ಡಿಪಿ1

ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪಪೂ ಕಾಲೇಜ್​ನಲ್ಲಿ ಆಯೋಜಿಸಿದ್ದ ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮದಲ್ಲಿ ಮಹೇಶ ಜಿ. ಮಾತನಾಡಿದರು. ಎಂ.ಕೆ. ನಾಯ್ಕ, ವಿರಾಜ್ ನಾಗರೇಕರ್, ಎಂ.ಎಂ. ಭಟ್ಟ, ಎಸ್.ಎಚ್. ನಾಯ್ಕ, ಇತರರಿದ್ದರು.

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪಪೂ ಕಾಲೇಜ್​ನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಜಿಲ್ಲಾ ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು.

ಮಕ್ಕಳ ರಕ್ಷಣಾ ಅಧಿಕಾರಿ ಮಹೇಶ ಜಿ. ಪೋಕ್ಸೋ ಕಾಯ್ದೆಯ ವಿಶೇಷತೆ, ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾದ ಅಂಶಗಳು ಮತ್ತು ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ವಿವರಿಸಿದರು. 2012ರಲ್ಲಿ ಜಾರಿಗೆ ಬಂದ ಕಾಯ್ದೆ 2019ರಲ್ಲಿ ತಿದ್ದುಪಡಿಗೊಂಡಿದೆ. 8 ವರ್ಷಗಳವರೆಗಿನ ಎಲ್ಲ ಮಕ್ಕಳನ್ನು ಶೋಷಣೆಯಿಂದ ಅದರಲ್ಲೂ ಲೈಂಗಿಕ ಶೋಷಣೆಯಿಂದ ರಕ್ಷಣೆ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಾದರೂ 1098ಕ್ಕೆ ಕರೆ ಮಾಡಿ ರಕ್ಷಣೆ ಪಡೆಯಬಹುದಾಗಿದೆ ಎಂದು ತಿಳಿಸಿದರು. ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರಾಧಿಕಾರಿ ವಿರಾಜ್ ನಾಗರೇಕರ್ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕ ಎಂ.ಎಂ. ಭಟ್ಟ ಸ್ವಾಗತಿಸಿದರು. ಎಸ್.ಎಚ್. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net