ನಾಡು ಕಟ್ಟಿದ ಮಹನೀಯರ ಸ್ಮರಿಸಿ

30 TKE 3 kannada
ಅಜ್ಜಂಪುರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಿರಣ್, ಹನುಮಂತಪ್ಪ, ಮನು, ಶ್ರೀನಿವಾಸ್ ಇತರರಿದ್ದರು.
Published on

ತರೀಕೆರೆ: ಹಳ್ಳಿಗಾಡಿನ ಜನ ಸೇರಿ ಸಣ್ಣ ಪುಟ್ಟ ಕೆಲಸದಲ್ಲಿ ತೊಡಗಿರುವವರಿಂದಲೇ ಕನ್ನಡ ಭಾಷೆ ಜೀವಂತವಾಗಿದೆ ಎಂದು ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಹೇಳಿದರು.

ಅಜ್ಜಂಪುರದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಎಲ್ಲರಲ್ಲೂ ಭಾಷಾಭಿಮಾನದ ಜತೆ ನಾಡು ಕಟ್ಟಲು ಶ್ರಮಿಸಿದ ಮಹನೀಯರು, ಸಾಹಿತಿಗಳ ಬಗ್ಗೆ ಗೌರವ ಭಾವ ಇರಬೇಕು. ಕನ್ನಡ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಸರ್ ಎಂ.ವಿಶ್ವೇಶ್ವರಯ್ಯ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಪದಾಧಿಕಾರಿಗಳಾದ ಕಿರಣ್, ಹನುಮಂತಪ್ಪ, ಶ್ರೀನಿವಾಸ್, ಮಂಜು, ಮನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net