ನಾಗರಾಜ್ ಪುರಸಭೆ ಪ್ರಭಾರ ಅಧ್ಯಕ್ಷ

16 bir 1 biriur
ಬೀರೂರಿನ ಪುರಸಭೆಯಲ್ಲಿ ಸೋಮವಾರ ಪ್ರಭಾರ ಅಧ್ಯಕ್ಷರನ್ನಾಗಿ ಎನ್.ಎಂ.ನಾಗರಾಜ್ ರವರನ್ನು ಆಯ್ಕೆ ಮಾಡಲಾಯಿತು. ಎಂ.ಪಿ.ಸುದರ್ಶನ್, ಮೋಹನ್ ಕುಮಾರ್ ಇತರರು ಇದ್ದರು.
Published on

ಬೀರೂರು: ವನಿತಾ ಮಧು ಬಾವಿಮನೆ ರಾಜೀನಾಮೆಯಿಂದ ತೆರವಾಗಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಎನ್.ಎಂ.ನಾಗರಾಜ್ ಅವರನ್ನು ಪ್ರಭಾರ ಅಧ್ಯಕ್ಷರಾಗಿ ಸದಸ್ಯರ ಸಹಮತದೊಂದಿಗೆ ಸೋಮವಾರ ಆಯ್ಕೆ ಮಾಡಲಾಯಿತು.

ಪಕ್ಷದ ಮುಖಂಡರ ಸೂಚನೆಯಂತೆ ವನಿತಾ ಮಧು ಬಾವಿಮನೆ ರಾಜೀನಾಮೆ ಸಲ್ಲಿಸಿದ್ದರು. ಅದು 10 ದಿನಗಳ ನಂತರ ಅಂಗೀಕೃತವಾಗಿತ್ತು. ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಾರದೆಂದು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಎನ್.ಎಂ.ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ನಡೆಯಬೇಕಿದೆ. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ಮಾನಿಕ್ ಬಾಷಾ, ರಾಜು, ರಘು, ಭಾಗ್ಯಲಕ್ಷ್ಮೀ, ಮುಖ್ಯಾಧಿಕಾರಿ ಜಿ.ಪ್ರಕಾಶ್, ಮುಖಂಡರಾದ ರುದ್ರಪ್ಪ, ಮೋಹನ್, ರುದ್ರೇಶ್, ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net