ನಾಗರಾಜು ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ

14-pnp 1
ಕೆ.ಬೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಶಂಭೂನಹಳ್ಳಿ ನಾಗರಾಜು ಅವರನ್ನು ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಸದಸ್ಯರು ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.
Published on

ಪಾಂಡವಪುರ: ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೈತಸಂಘ ಬೆಂಬಲಿತ ನಾಗರಾಜು ವಿರೋಧವಾಗಿ ಆಯ್ಕೆಯಾದರು.

ಅಧಿಕಾರ ಹಂಚಿಕೆ ಒಡಂಬಡಿಕೆ ಸೂತ್ರದನ್ವಯ ಮಾಕೇಗೌಡ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಒಟ್ಟು 21 ಸದಸ್ಯರ ಬಲದ ಗ್ರಾಪಂನಲ್ಲಿ ರೈತಸಂಘ ಬೆಂಬಲಿತ 19 ಹಾಗೂ ಜೆಡಿಎಸ್ ಬೆಂಬಲಿತ ಇಬ್ಬರು ಸದಸ್ಯರು ಇದ್ದಾರೆ. ನಾಗರಾಜು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಪರಿಣಾಮ ಚುನಾವಣಾಧಿಕಾರಿ ಪ್ರಕಾಶ್ ಅವಿರೋಧ ಆಯ್ಕೆ ಘೋಷಿಸಿದರು.

ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ರೈತ ಸಂಘದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಟಾಕಿ ಸಿಡಿಸಿ ಸಹಿ ವಿತರಿಸಿ ಸಂಭ್ರಮಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿದ ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಸದಸ್ಯರ ಬೆಂಬಲ ಮತ್ತು ಸಹಕಾರದೊಂದಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಎ.ಆರ್.ಮಂಜುಳಾ, ಸದಸ್ಯರಾದ ಆನಂದ, ಎಸ್.ಆರ್.ರಾಜಲಕ್ಷ್ಮೀ, ಚಂದ್ರಶೇಖರ, ಲಕ್ಷ್ಮಮ್ಮ, ಕೆ.ಜಿ.ಆನಂದ, ಪವಿತ್ರಾ, ಕೆಂಪರಾಜು, ಮಹೇಶ್, ಅಶೋಕ, ಸೌಮ್ಯಾ, ಮುಖಂಡರಾದ ಕೃಷ್ಣೇಗೌಡ, ಬಿ.ಟಿ.ಶಿವಣ್ಣ, ಮಂಡಿಬೆಟ್ಟಹಳ್ಳಿ ಜಗದೀಶ್, ಶಂಭೂನಹಳ್ಳಿ ಸತೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net