ನಾಗರಹೊಳೆಯಲ್ಲೂ ಆನೆ ಗಣತಿ ಆರಂಭ

IMG-20230517-WA0069
Published on

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬುಧವಾರ ಆನೆ ಗಣತಿ ಆರಂಭವಾಗಿದ್ದು, ಮೊದಲ ದಿನ 91 ಬೀಟ್‌ಗಳಲ್ಲೂ ನೇರ ಸೈಟಿಂಗ್(ಸ್ಯಾಂಪಲ್ ಬ್ಲಾಕ್ ಕೌಂಟ್) ಆಗಿದೆ.


91 ಬೀಟ್‌ಗಳಲ್ಲಿ 300ಕ್ಕೂ ಹೆಚ್ಚು ಸಿಬ್ಬಂದಿ ಗಣತಿಯಲ್ಲಿ ಪಾಲ್ಗೊಂಡು ಆನೆಗಳ ಹಿಂಡು, ಒಂಟಿ ಆನೆ ಕಂಡುಬಂದ ಕೂಡಲೇ ಫೋಟೋ ಕ್ಕಿಕ್ಕಿಸಿಕೊಂಡಿದ್ದಾರೆ. ಪ್ರತಿ ಬೀಟ್‌ನಲ್ಲಿ ಕನಿಷ್ಠ 5 ಚದರ ಕಿ.ಮೀ. ವ್ಯಾಪ್ತಿಯ ತಿರುಗಾಟ ಕಡ್ಡಾಯಗೊಳಿಸಿದ್ದು, ಮೊದಲ ದಿನ 300 ಚದರ ಕಿ.ಮೀ.ಗೂ ಹೆಚ್ಚು ವ್ಯಾಪ್ತಿಯಲ್ಲಿ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದಾರೆ ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net