ನಾಗಪ್ಪ ಬಡಾವಣೆಯಲ್ಲಿ ಶಾಸಕ ಪಾದಯಾತ್ರೆ

7kgl1 (1)
Published on

ಕೊಳ್ಳೇಗಾಲ: ಪಟ್ಟಣದ 6 ನೇ ವಾರ್ಡ್ ವ್ಯಾಪ್ತಿಯ ನಾಗಪ್ಪ ಬಡಾವಣೆಗೆ ಶಾಸಕ ಎನ್.ಮಹೇಶ್ ನಗರಸಭೆ ಅಧಿಕಾರಿಗಳೊಡನೆ ಭೇಟಿ ನೀಡಿ ಮೂಲಸೌಕರ್ಯಗಳನ್ನು ಪರಿಶೀಲನೆ ನಡೆಸಿದರು.
ಬಡಾವಣೆಗೆ ಆಗಮಿಸಿದ ಶಾಸಕರಿಗೆ ನಿವಾಸಿಗಳು ಮೂಲಸೌಕರ್ಯಗಳ ಸಮಸ್ಯೆ ಬಗ್ಗೆ ಹೇಳಿಕೊಂಡರು. ಈ ವೇಳೆ ಶಾಸಕ ಮಾತನಾಡಿ, ಯುಜಿಡಿ ಸೌಲಭ್ಯ ಇಲ್ಲದಿದ್ದರಿಂದ ರಸ್ತೆಯನ್ನು ಸರಿಪಡಿಸಲಾಗಿಲ್ಲ. ಈ ಬಗ್ಗೆ ನಗರಸಭೆ ಪೌರಯುಕ್ತರಿಗೆ ಸೂಚನೆ ನೀಡಿದ್ದೇನೆ. ತ್ವರಿತವಾಗಿ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ ಎಂದರು.

ನಗರಸಭೆ ಸದಸ್ಯ ಸೆಲ್ವರಾಜು, ಪೌರಾಯುಕ್ತ ನಂಜುಂಡಸ್ವಾಮಿ, ಎಇಇ ಸುರೇಶ್, ಇಂಜಿನಿಯರ್ ನಾಗೇಂದ್ರ, ಬಡಾವಣೆ ನಿವಾಸಿಗಳಾದ ಪುಟ್ಟಸ್ವಾಮಿ, ಶಿವಮೂರ್ತಿ, ಶಿವಸ್ವಾಮಿ, ನಂಜುಂಡಸ್ವಾಮಿ, ಸಿದ್ದಲಿಂಗಸ್ವಾಮಿ, ರಾಚಪ್ಪ, ನಾಗರಾಜು, ಸಿದ್ದಪ್ಪಸ್ವಾಮಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net