

ನವದೆಹಲಿ: ಲಾಕ್ಡೌನ್ ಕಾರಣಕ್ಕೆ ಮದುವೆ, ಉತ್ಸವ, ಹಬ್ಬಗಳನ್ನೆಲ್ಲ ರದ್ದುಪಡಿಸಲಾಗಿದೆ ಅಥವಾ ಮುಂದೂಡಲಾಗಿದೆ. ಆದರೂ ಎಷ್ಟೋ ಜನ ಈ ವೇಳೆ ಸರಳ ವಿವಾಹವಾಗುತ್ತಿದ್ದಾರೆ.
ಪಂಜಾಬ್ನಲ್ಲಿ ಹೀಗೆ ಸರಳವಾಗಿ ದೇವಾಲಯದಲ್ಲಿ ವಿವಾಹವಾದ ದಂಪತಿ ಬೈಕ್ನಲ್ಲಿ ಮನೆಯತ್ತ ಹೊರಟಿದ್ದರು. ಅವರನ್ನು ಕಂಡ ಪೊಲೀಸರು ಬೈಕ್ ನಿಲ್ಲಿಸಿ ಪರಿಶೀಲಿಸಿದ್ದಲ್ಲದೆ, ಲಾಕ್ಡೌನ್ ಅವಧಿಯಲ್ಲಿ ಮನೆಯಿಂದ ಹೊರಬಂದ ಕಾರಣ ಕೇಳಿದರು. ಅದಕ್ಕೆ ಅವರು ನಗರಪಾಲಿಕೆಯಿಂದ ಅಗತ್ಯವಾದ ಅನುಮತಿ ಪಡೆದು ದೇವಾಲಯದಲ್ಲಿ ವಿವಾಹವಾಗಿ ಮನೆಗೆ ಹಿಂದಿರುಗುತ್ತಿರುವುದಾಗಿ ತಿಳಿಸಿದರು.
ಇದನ್ನು ಕೇಳಿದ ಪೊಲೀಸರು ಹೂವು ಹಾಗೂ ಸಿಹಿ ನೀಡಿ ಶುಭಾಶಯ ಕೋರಿದ ವಿಡಿಯೋ ವೈರಲ್ ಆಗಿದೆ. ಈ ಮದುವೆಯಲ್ಲಿ ಐವರಷ್ಟೇ ಪಾಲ್ಗೊಂಡಿದ್ದರು.