

ಶ್ರೀ ಹುಲಿಯಮ್ಮ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ನಿರ್ಮಿಸುತ್ತಿರುವ ‘ನಮ್ಮೂರ ಮಾರಮ್ಮ’ ಕನ್ನಡ ಚಲನಚಿತ್ರ 2025ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವಾಲ್ಮೀಕಿ ನಿಂಗರಾಜು ತಿಳಿಸಿದರು.
ಗ್ರಾಮೀಣ ಸೊಗಡಿನ ಕಥಾಹಂದರವುಳ್ಳ ಈ ಚಿತ್ರದ ಶೇ.95ರಷ್ಟು ಚಿತ್ರೀಕರಣ ಮುಕ್ತಾಯವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು. ಮುಖಂಡರಾದ ಕುಮಾರ್, ತಾಯೂರು ಪ್ರಕಾಶ್, ಎಂ.ನರಸಿಂಹಮೂರ್ತಿ, ದ್ಯಾವಪ್ಪ ನಾಯಕ ಇತರರಿದ್ದರು.