ನಮ್ಮ ಅಪ್ಪಾಜಿ ಕ್ಯಾಂಟೀನ್ ಉದ್ಘಾಟನೆ

22 SARAG 6
ಸರಗೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೆಸರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಉದ್ಘಾಟಿಸಲಾಯಿತು. ಶ್ರೀ ಮಹಾದೇವ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮೀಜಿ, ಶ್ರೀ ನಾಗೇಂದ್ರ ಸ್ವಾಮೀಜಿ ಇತರರು ಇದ್ದರು.
Published on

ಸರಗೂರು: ಪಟ್ಟಣದಲ್ಲಿ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೆಸರಿನಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಉದ್ಘಾಟಿಸಲಾಯಿತು.


ಬಿಡಗಲು ವಿರಕ್ತಮಠದ ಶ್ರೀ ಮಹಾದೇವ ಸ್ವಾಮೀಜಿ, ಹಂಚೀಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ದಡದಹಳ್ಳಿ ಶ್ರೀ ಷಡಕ್ಷರಿ ಸ್ವಾಮೀಜಿ, ಜಕ್ಕಹಳ್ಳಿಯ ಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಮಾತೆ ಗೌತಮಿ ಬಂತೇಜಿ ಕ್ಯಾಂಟಿನ್‌ಗೆ ಚಾಲನೆ ನೀಡಿದರು.


ಬಿಡಗಲು ವಿರಕ್ತಮಠದ ಶ್ರೀ ಮಹಾದೇವ ಸ್ವಾಮೀಜಿ, ದಡದಹಳ್ಳಿ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಬಡವರು, ಕೂಲಿ ಕಾರ್ಮಿಕರು ಹಾಗೂ ನಿತ್ಯದ ಕಾರ್ಯಗಳಿಗೆ ಗ್ರಾಮಾಂತರ ಪ್ರದೇಶದಿಂದ ಬರುವವರ ಹಸಿವು ನೀಗಿಸುವ ಕೆಲಸವನ್ನು ಎಂದಿಗೂ ಮರೆಯಬಾರದು ಎಂದರು.
ಅಪ್ಪಾಜಿ ಕ್ಯಾಂಟೀನ್ ಸಂಸ್ಥಾಪಕ, ಜೆಡಿಎಸ್ ಮುಖಂಡ ಕೃಷ್ಣನಾಯಕ ಮಾತನಾಡಿ, ಕ್ಯಾಂಟೀನ್‌ನಲ್ಲಿ ಸಂಜೆವರೆಗೂ ತಿಂಡಿ, ಊಟ ರಿಯಾಯಿತಿ ದರದಲ್ಲಿ ದೊರೆಯಲಿದೆ. ರಾತ್ರಿ ಊಟ ಇರುವುದಿಲ್ಲ ಎಂದು ಹೇಳಿದರು. ತಾಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಲ್.ರಾಜಣ್ಣ, ಮುಖಂಡರಾದ ಸಿ.ವಿ.ನಾಗರಾಜು, ಶಂಭೇಗೌಡ, ಯತೀಶ್‌ಕುಮಾರ್, ಬಿ.ಮಟಕೆರೆ ಜಿತೇಂದ್ರ, ಕೊತ್ತೇಗಾಲ ಬಸವಣ್ಣ, ಕೆ.ಟಿ.ವೆಂಕಟೇಶ್, ಶಂಕರಲಿಂಗೇಗೌಡ, ಮುತ್ತಿಗೆಹುಂಡಿ ಬಸವಣ್ಣ, ಎತ್ತಿಗೆ ಶೇಖರ್, ಹಾದನೂರು ಮಹದೇವಸ್ವಾಮಿ, ಸಿ.ನರಸಿಂಹರಾಜು, ವಕೀಲ ಪ್ರಶಾಂತ್, ಪ್ರಸನ್ನ, ಸಾಗರೆ ಶಂಕರ್, ಬೀದರಹಳ್ಳಿ ಪ್ರಕಾಶ್‌ನಾಯಕ, ಸೋಮು, ಮುಳ್ಳೂರು ನಿಂಗರಾಜು, ಗಣೇಶ್, ಕುರ್ಣೇಗಾಲ ಬಸವಣ್ಣ, ನಿಂಗಣ್ಣೇಗೌಡ, ಕಲ್ಲಂಬಾಳು ಗೋವಿಂದರಾಜು, ರವಿ, ಶಿವಕುಮಾರ್, ಮಹದೇವಪ್ಪ, ಮಹದೇವನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net