

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ 2ನೇ ದಿನದ ಕಾರ್ಯಕ್ರಮ ಆರಂಭಿಸಿದ್ದು ಮಂಗಳವಾರ ಬೆಳಗ್ಗೆ ದಂಪತಿ ಸಮೇತ ರಾಜ್ಘಾಟ್ಗೆ ತೆರಳಿ ರಾಷ್ಟ್ರಪಿತ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದರು.
ರಾಷ್ಟ್ರಪತಿ ಭವನದಿಂದ ನೇರವಾಗಿ ರಾಜ್ಘಾಟ್ಗೆ ಪತ್ನಿ ಮೆಲಾನಿಯ ಜತೆ ತಲುಪಿ ಗಾಂಧಿ ಸಮಾಧಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು. ನಂತರ ರಾಜ್ಘಾಟ್ ಉದ್ಯಾನದಲ್ಲಿ ತಮ್ಮ ಭೇಟಿಯ ಸ್ಮರಣೆಗಾಗಿ ಗಿಡ ನೆಡನೆಟ್ಟು ನೀರು ಹಾಕಿದರು.
ಡೊನಾಲ್ಡ್ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅನಿಸಿಕೆ ಬರೆದು ಸಹಿಹಾಕಿದರು. ಈ ವೇಳೆ ಗಾಂಧಿ ಟ್ರಸ್ಟ್ ವತಿಯಿಂದ ಟ್ರಂಪ್ಗೆ ಗಾಂಧೀಜಿ ಪುತ್ಥಳಿ ನೀಡಿ ಗೌರವಿಸಲಾಯಿತು.