ನದಿಯಲ್ಲಿ ಮುಳುಗಿ ಯುವಕ ಸಾವು

Published on

ಕೆ.ಆರ್.ಸಾಗರ: ಬೆಳಗೊಳ ಗ್ರಾಮದ ಬಳಿಯ ಬಲಮುರಿ ಪ್ರವಾಸಿ ತಾಣ ಕಾವೇರಿ ನದಿಯಲ್ಲಿ ಬುಧವಾರ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಎಚ್.ಡಿ.ಕೋಟೆ ತಾಲೂಕಿನ ಜಿ.ಬಿ. ಸರಗೂರು ಬಳಿಯ ಮುದ್ದಿನಹುಂಡಿ ಗ್ರಾಮದ ನಿವಾಸಿ ದಿನೇಶ್(24) ಮೃತ ಯುವಕ.

ಚಿಕನ್ ಅಂಗಡಿಯಲ್ಲಿ ದಿನೇಶ್ ಕೆಲಸ ಮಾಡುತ್ತಿದ್ದು, ಬುಧವಾರ ಮೂವರು ಸ್ನೇಹಿತರ ಜತೆ ಬೈಕಿನಲ್ಲಿ ಬಲಮುರಿ ಪ್ರವಾಸಿ ತಾಣಕ್ಕೆ ಬಂದು, ಅಲ್ಲಿ ನಿರ್ಮಿಸಿರುವ ಅಡ್ಡ ಸೇತುವೆ ಬಳಿ ಈಜಲು ಹೋಗಿ ನದಿಯಲ್ಲಿ ಮುಳುಗಿದ್ದಾನೆ.

ತಕ್ಷಣ ಆತನ ಸ್ನೇಹಿತರು ಸಾರ್ವಜನಿಕರ ಸಹಾಯದಿಂದ ನದಿಯಿಂದ ಹೊರ ತೆಗೆದರೂ ದಿನೇಶ್ ಮೃತಪಟ್ಟಿದ್ದಾನೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಕೆ.ಆರ್.ಸಾಗರ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದ ಪಾಲಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಸೂರು ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ವೈದ್ಯರು ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net