ನಟ ದರ್ಶನ್‌ ಕ್ರೂರ ವ್ಯಕ್ತಿಯಲ್ಲ

Ganeshrao
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.7088092, 0.64949983);sceneMode: 5767168;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಲು ಕಾನೂನು ಇದೆ. ಈಗಲೇ ಆರೋಪಿತರನ್ನು ಅಪರಾಧಿ ಎನ್ನಲು ಸಾಧ್ಯವಿಲ್ಲ ಎಂದು ಪೋಷಕ ನಟ, ನಿರ್ಮಾಪಕ ಗಣೇಶ್‌ರಾವ್ ಹೇಳಿದರು.

ರೇಣುಕಸ್ವಾಮಿ ಮನೆಗೆ ಶನಿವಾರ ಭೇಟಿ ನೀಡಿ ಪಾಲಕರೊಂದಿಗೆ ಕೆಲಕಾಲ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂತಹ ಸ್ಥಿತಿಯಲ್ಲಿ ಪಾಲಕರನ್ನು ನೋಡಿದರೆ ತುಂಬಾ ನೋವಾಗುತ್ತಿದೆ. ಇಡೀ ಕುಟುಂಬ ಚಿಂತಾಜನಕ ಸ್ಥಿತಿಯಲ್ಲಿದ್ದು, ಏನು ಹೇಳಬೇಕೆಂಬುದು ಗೊತ್ತಾಗುತ್ತಿಲ್ಲ ಎಂದರು.

ದರ್ಶನ್‌ರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇಂತಹ ಕ್ರೂರಮಟ್ಟಕ್ಕೆ ಇಳಿಯುವಂತವರಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಆದರೆ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವ ಮುನ್ನವೇ ಅಪರಾಧಿ ಎಂಬುದಾಗಿ ಬಿಂಬಿಸುವುದು ಸೂಕ್ತವಲ್ಲ. ದೇವರು, ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇದ್ದು, ತಪ್ಪಿತಸ್ಥರಿಗೆ ಖಂಡಿತ ಶಿಕ್ಷೆಯಾಗಲಿ ಎಂದು ಹೇಳಿದರು.

ನಿರ್ದೇಶಕ ಪುರುಷೋತ್ತಮ್ ಮಾತನಾಡಿ, ಕಷ್ಟದಲ್ಲಿ ಸ್ಪಂದಿಸುವ, ಸಾಂತ್ವಾನ ಹೇಳುವ ಮೂಲಕ ನೊಂದವರಿಗೆ ಧೈರ್ಯ ತುಂಬಲು ಮಾನವೀಯ ದೃಷ್ಟಿಕೋನದಿಂದ ಬಂದಿದ್ದೇವೆ. ದುರ್ಘಟನೆಯಿಂದ ನಮ್ಮ ಮನಸ್ಸಿಗೂ ಆಘಾತವಾಗಿದೆ ಎಂದರು.

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪು ಮಾಡಿದವರಿಗೆ ಶಿಕ್ಷಿಸಲು ನ್ಯಾಯಾಲಯವಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ತಾರಕೇಶ್ವರ ಚಿತ್ರದ ಸಹ ನಿರ್ಮಾಪಕ ಬಸವರಾಜ್ ದೇಸಾಯಿ, ಎಡಿಟರ್ ಅನಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net