ನಚಿಕೇತನ ನಿಲಯವನ್ನು ಉನ್ನತ ಶಿಕ್ಷಣ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು / ಸಂಸದ ಮುನಿಸ್ವಾಮಿವಿಜಯವಾಣಿ ಸುದ್ದಿಜಾಲ ಕೋಲಾರ

Published on

ಕೋಲಾರದ ನಚಿಕೇತನ ನಿಲಯವನ್ನು ಉನ್ನತ ಶಿಕ್ಷಣ ತರಬೇತಿ ಕೇಂದ್ರವನ್ನಾಗಿ ಪರಿವರ್ತಿಸಲು ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ತೀರ್ಮಾನಿಸಿದ್ದು, ಸುಮಾರು ೧೨೫ ಲಕ್ಷ ರೂ ವೆಚ್ಚದಲ್ಲಿ ಅಧುನಿಕ ಸುಸಜ್ಜಿತವಾದ ಕಟ್ಟಡದೊಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧಾರಿಸಲಾಗಿದೆ' ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸರ್ಕಾರಿ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಐ.ಎ.ಎಸ್. ಕೆ.ಎ.ಎಸ್. ಯು.ಪಿ.ಎಸ್. ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಶಿಕ್ಷಣದ ತರಭೇತಿ ಕೇಂದ್ರವು ಅತ್ಯವಶ್ಯಕವಾಗಿತ್ತು. ಇದಕ್ಕೆ ಸಂಸದರ ಅನುದಾನದಲ್ಲಿ ೫೦ ಲಕ್ಷ ರೂ ಮಂಜೂರು ಮಾಡಲಾಗುವುದು, ಇದೇ ರೀತಿ ಸ್ಥಳೀಯ ಶಾಸಕರಾದ ಕೊತ್ತೂರು ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರು ಸಹ ತಮ್ಮ ಅನುದಾನದಲ್ಲಿ ಸಹಕಾರ ನೀಡಲಿದ್ದಾರೆ. ನಚೇಕೇತನ ನಿಲಯದಲ್ಲಿನ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದರು.

ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಮಹಿಳಾ ಕಾಲೇಜಿನಲ್ಲಿ ಬೋಧನಾ ಸಿಬ್ಬಂದಿ ಕೊರತೆ ಇದ್ದು, ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕಿದೆ. ಈ ಸಂಬAಧ ಕಾಲೇಜಿನ ಆಡಳಿತ ಮಂಡಳಿ ಕಾಳಜಿವಹಿಸಿ, ಜನಪ್ರತಿನಿಧಿಗಳ ಸಭೆ ಕರೆದು ಸರ್ಕಾರದ ಗಮನ ಸೆಳೆದು ಅಗತ್ಯವಾದ ಮೂಲ ಸೌಲಭ್ಯಗಳ ಪಟ್ಟಿ ತಯಾರಿಸಿ ನೀಡಿದಲ್ಲಿ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು, ಕಾಲೇಜಿನಲ್ಲಿ ಡಿಜಿಟಲ್ ಗ್ರಂಥಾಲಯ ಅಗತ್ಯವಿದೆ. ಪ್ರಾಂಶುಪಾಲರು ಗ್ರಂಥಾಲಯದ ಸೆಸ್ ಸದ್ಬಳಿಕೆ ಮಾಡಿಕೊಂಡು ನಿರ್ಮಿಸಬೇಕು ಎಂದು ತಿಳಿಸಿದರು.

ಮಹಿಳಾ ಕಾಲೇಜಿಗೆ ಬಸ್ಸು ವ್ಯವಸ್ಥೆ

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಅಧಿಕಾರಿಗಳು ಹಾಗೂ ಎಂಜಿನಿಯರ್ ಕರೆಸಿ ಕಾಲೇಜಿನ ಕಟ್ಟಡಗಳ ಅಭಿವೃದ್ಧಿಗೆ ಪರಿಶೀಲನೆ ನಡೆಸಲಾಗಿದೆ. ಕಾಲೇಜು ಅಭಿವೃದ್ಧಿಗೆ ಬದ್ಧ. ಈಗಾಗಲೇ ನೀರಿನ ವ್ಯವಸ್ಥೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಇಲ್ಲಿಗೆ ಕರೆಸುತ್ತೇನೆ. ಅವರೊಂದಿಗೆ ಸಂವಾದ ಏರ್ಪಡಿಸುತ್ತೇನೆ, ಮಹಿಳಾ ಕಾಲೇಜಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಮಾಡಿಸಿದ್ದೇನೆ. ಗಣೇಶ ಹಬ್ಬದ ಬಳಿಕ ಬಸ್ಸುಗಳು ಕಾರ್ಯಾಚರಣೆ ಮಾಡಲಿವೆ' ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಏಕೈಕ ಮಹಿಳಾ ಕಾಲೇಜು ಇದಾಗಿದ್ದು, ಇದಕ್ಕೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಲು ಸರ್ಕಾರದ ಜೊತೆ ಮಾತನಾಡಲಾಗುವುದು ಎಂದರು.

ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಗರಸಭೆ ಸದಸ್ಯರಾದ ನಾರಾಯಣಮ್ಮ, ಅಂಬರೀಷ್, ರಫಿಕ್, ಇಜಾಜ್, ಪ್ರಾಂಶುಪಾಲ ಡಾ.ಡಿ.ಇ.ಗಂಗಾಧರ್, ಉಪನ್ಯಾಸಕರಾದ ಸಿ.ಎ.ರಮೇಶ್, ಬೃಂದಾದೇವಿ, ಕೆ.ಎಲ್.ಶ್ರೀನಿವಾಸಯ್ಯ, ಧರ್ಮೇಂದ್ರ, ಸುಮಂತ್, ಜಿ.ಎಂ.ಪ್ರಕಾಶ್, ಮುನಿರಾಜು ಇದ್ದರು.

ಚಿತ್ರ ೧೬ ಕೆ.ಎಲ್.ಆರ್. ೦೮ : ಮಹಿಳಾ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸದ ಮುನಿಸ್ವಾಮಿ ಮಾತನಾಡುತ್ತಿರುವುದು.

ಚಿತ್ರ ೧೬ ಕೆ.ಎಲ್.ಆರ್. ೦೮ಎ : ಮಹಿಳಾ ಸಮಾಜದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net