

ಕೋಲಾರ: ಸ್ಥಳೀಯ ನಗರಸಭೆಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. 10 ವರ್ಷದ ಹಿಂದೆ ಅಧ್ಯಕ್ಷ ಬಿ.ಎಂ.ಮುಬಾರಕ್ ತೆಗೆದುಕೊಂಡಿದ್ದ ಕಾನೂನುಬಾಹಿರ ತೀರ್ವಾನದಿಂದ ನಗರಸಭೆಗೆ ಜಮೆಯಾಗಬೇಕಿದ್ದ ಕೋಟ್ಯಂತರ ರೂ. ಆದಾಯ ಕೈತಪ್ಪಿರುವುದು ಅಧಿಕಾರಿಗಳ ತನಿಖಾ ವರದಿಯಲ್ಲಿ ಬಯಲಾಗಿದೆ.
2014ರಲ್ಲಿ 272 ಮಳಿಗೆಗಳ ಬಾಡಿಗೆ ಮತ್ತು ಠೇವಣಿ ಹೆಚ್ಚಿಸುವ ಸಂಬಂಧ ವಿಷಯ ಚರ್ಚೆಯಾಗಿತ್ತು. 2014ರ ಅ.17ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಂದಿನ ಅಧ್ಯಕ್ಷ ಮುಬಾರಕ್ ನಿಯಮ ಬಾಹಿರ ತೀರ್ವಾನ ಹಾಗೂ ಆರ್ಥಿಕ ನಷ್ಟ ಉಂಟು ವಾಡಿರುವ ಬಗ್ಗೆ ಹಾಲಿ ಉಪಾಧ್ಯಕ್ಷ ಪ್ರವೀಣ್‌ಗೌಡ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಪೌರಾಯುಕ್ತ ಪ್ರಸಾದ್ ಪರಿಶೀಲಿಸಿ ಸಹಾಯಕ ಕಮಿಷನರ್‌ಗೆ ಸಲ್ಲಿಸಿರುವ ವರದಿಯಲ್ಲಿ ಮುಬಾರಕ್ ಅವಧಿಯಲ್ಲಿ ನಡೆದಿರುವ ಲೋಪಗಳನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಅಂಗಡಿ ಮಳಿಗೆಗಳನ್ನು 30ರಿಂದ 40 ವರ್ಷದ ಹಿಂದೆ ಹರಾಜಿನಲ್ಲಿ ವಿತರಿಸಿದ್ದು, ಅವಧಿ ಮುಗಿದರೂ ಮರು ಹರಾಜು ವಾಡದೆ ಮುಂದುವರಿಸಿಕೊಂಡು ಬರಲಾಗುತ್ತಿತ್ತು. 2013ರಲ್ಲಿ ನಾಜಿಯಾ ಅಧ್ಯಕ್ಷರಾಗಿದ್ದಾಗ ಲೀಸ್ ಅವಧಿ ಮುಗಿದಿರುವ ಅಂಗಡಿಗಳಿಗೆ ಹೊಸ ದರ ವಿಧಿಸಿ ಮುಂದುವರಿಸುವುದು ಹಾಗೂ ಷರತ್ತಿಗೆ ಒಪ್ಪದ ಬಾಡಿಗೆದಾರರನ್ನು ಹೊರಹಾಕಿ ಮರು ಹರಾಜು ವಾಡಲು ತೀರ್ವಾನಿಸಲಾಗಿತ್ತು.
ಆದರೆ ನಂತರದ ದಿನಗಳಲ್ಲಿ ಅಧ್ಯಕ್ಷರಾಗಿದ್ದ, ಮುಬಾರಕ್ ನೆಲ ವಾಳಿಗೆಗೆ 1 ಲಕ್ಷ, ಒಂದನೇ ಮಹಡಿ ಅಂಗಡಿಗೆ 50 ಸಾವಿರ ರೂ. ಮುಂಗಡ ಹೆಚ್ಚಿಸಿ, ಹಾಲಿ ವಸೂಲಿಯಾಗುತ್ತಿದ್ದ ಬಾಡಿಗೆಯ ಶೇ.300 ಹೆಚ್ಚಿಸಲು ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದ ತೀರ್ವಾನ ತೆಗೆದುಕೊಂಡಿದ್ದರು. ಆಗ ಸಾರ್ವಜನಿಕ ಸಂಗ್ರಹಣೆಗಳ ಪಾರದರ್ಶಕತೆ ಅಧಿನಿಯಮಕ್ಕೆ ಸಂಬಂಧಿಸಿದಂತೆ ನಗರಾಡಳಿತ ಇಲಾಖೆ ನೀಡಿದ್ದ ವಾರ್ಗಸೂಚಿ ಗಾಳಿಗೆ ತೂರಲಾಗಿತ್ತು. ಮಳಿಗೆಗೆ ಬಾಡಿಗೆ ನಿಗದಿ ವಾಡುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ. ಅನುಷ್ಠಾನಾಧಿಕಾರಿ ಪೌರಾಯುಕ್ತರಾಗಿದ್ದರೂ ಸಭೆ ಅಧ್ಯಕ್ಷರ ತೀರ್ವಾನಕ್ಕೆ ಬಿಟ್ಟಿದ್ದು, ಕಾನೂನು ಬಾಹಿರವಾಗಿದೆ. ಈ ಎಲ್ಲ ಅಂಶ ಪರಿಶೀಲಿಸಿದಾಗ ಪ್ರಕರಣದಲ್ಲಿ ನಗರಸಭೆಗೆ ಆರ್ಥಿಕ ನಷ್ಟ ಉಂಟು ವಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಪೌರಾಯುಕ್ತ ಪ್ರಸಾದ್ ತನಿಖಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗೆ ನೀಡಿರುವ ವರದಿಯಲ್ಲಿ ಉಲ್ಲೇಖಿಸಿರುವುದು ಗಮನಾರ್ಹ.
ಮುಬಾರಕ್ ತೆಗೆದುಕೊಂಡಿದ್ದ ತೀರ್ವಾನದಂತೆ 272 ಅಂಗಡಿಗಳಿಂದ 2.72 ಕೋಟಿ ರೂ. ಠೇವಣಿ ಬರಬೇಕಿತ್ತು. ಆದರೆ ನಗರಸಭೆಗೆ ಪಾವತಿಯಾದದ್ದು 55,15000 ರೂ. ವಾತ್ರ. ಉಳಿದ ಹಣ ವಸೂಲಿಗೆ ಸಂಬಂಧಿಸಿದ ವಿವರಗಳು ನಗರಸಭೆ ಕಚೇರಿಯಲ್ಲಿಲ್ಲ. ರಸೀದಿ ಪುಸ್ತಕಗಳೊಂದಿಗೆ ಕಾಣೆಯಾಗಿರುವ ಎಸ್.ರವಿ ಎಂಬಾತನ ಮೇಲೆ ಗಲ್‌ಪೇಟೆ ಠಾಣೆಗೆ ದೂರು ನೀಡಲಾಗಿದೆ. ಕೋಟ್ಯಂತರ ರೂ. ಅವ್ಯವಹಾರ ಆರೋಪವಿದ್ದು, ಪೊಲೀಸರು ಆತನ ವಿರುದ್ಧ ಎನ್‌ಸಿಆರ್ ದಾಖಲಿಸಿ ಕೈತೊಳೆದುಕೊಂಡಿದ್ದಾರೆ.
50 ಸಾವಿರ, ಲಕ್ಷ ರೂ. ಠೇವಣಿ ಹಣ ವಾಪಸ್ ನೀಡಲಿ, ಅಂಗಡಿ ಖಾಲಿ ವಾಡುತ್ತೇವೆ ಎನ್ನುತ್ತಾರೆ ಬಾಡಿಗೆದಾರರು. ರಸೀದಿ ಸಹ ತೋರಿಸುತ್ತಾರೆ. ಆದರೆ ನಗರಸಭೆಯಲ್ಲಿ ರಸೀದಿ ಇಲ್ಲ ಎಂದು ಇಡೀ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.
ಜಿಲ್ಲಾಧಿಕಾರಿ ಕ್ರಮ ಅಗತ್ಯ: ಪ್ರಕರಣದ ಸಂಬಂಧ ತನಿಖಾಧಿಕಾರಿಯೂ ಆಗಿರುವ ಉಪವಿಭಾಗಾಧಿಕಾರಿ ಈಗಾಗಲೆ ಜಿಲ್ಲಾಧಿಕಾರಿಗೆ ತನಿಖಾ ವರದಿ ಸಲ್ಲಿಸಿರಬಹುದು. ಕೋಟ್ಯಂತರ ರೂ. ಅವ್ಯವಹಾರವಾಗಿರುವುದರಿಂದ ಸಿಒಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರಿಂದ ಹಣ ವಸೂಲಿ ವಾಡಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯ.
ಅಂಗಡಿ-ಮಳಿಗೆಗಳ ಬಾಡಿಗೆ ಮತ್ತು ಠೇವಣಿ ಹೆಚ್ಚಿಸುವ ಸಂಬಂಧ ಈ ಹಿಂದೆ ನಿಯಮ ಗಾಳಿಗೆ ತೂರಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತನಿಖೆ ಕೈಗೊಂಡಿದ್ದು, ವರದಿ ಸಹ ಸಲ್ಲಿಸಲಾಗಿದೆ. ಪೌರಾಯುಕ್ತರು ನೀಡಿದ್ದ ವಾಹಿತಿಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ, ಕೋಲಾರ ನಗರಸಭೆಗೆ ಯಾರು ಎಷ್ಟೇ ನಷ್ಟ ಉಂಟು ವಾಡಿದ್ದರೂ ಅದನ್ನು ವಾಪಸ್ ಪಡೆಯುವ ಕೆಲಸವಾಗಬೇಕು. ನಗರಸಭೆ ಖಾತೆಗೆ ಹಣ ಜಮೆ ವಾಡುವಾಗ 10 ಲಕ್ಷ, 20 ಲಕ್ಷ ರೂನಂತೆ ಪಾವತಿಸಲಾಗಿದೆ. ಸಿಒಡಿ ತನಿಖೆಯಾದರೆ ಒಳಿತು ಎನಿಸುತ್ತದೆ. ಎನ್.ಎಸ್.ಪ್ರವೀಣ್ಗೌಡ, ಉಪಾಧ್ಯಕ್ಷ, ನಗರಸಭೆ