ನಗರದಲ್ಲಿ ಶಕ್ತಿದೇವತೆಗಳ ಉತ್ಸವ

HUN-OCT-6-2(MAHAKALAMMA TEMPLE UTSAVA )
ಹುಣಸೂರು ನಗರದ ಪೌರಕಾರ್ಮಿಕ ಕಾಲನಿಯ ಮಹಾಕಾಳಮ್ಮದೇವರ ಉತ್ಸವದಲ್ಲಿ ದೇವಾಲಯ ಸಮಿತಿ ಸದಸ್ಯರು ಮತ್ತು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.
Published on

ಹುಣಸೂರು: ನವರಾತ್ರಿಯ ಕೊನೇ ದಿನವಾದ ಬುಧವಾರ ವಿಜಯದಶಮಿ ಅಂಗವಾಗಿ ನಗರದಾದ್ಯಂತ ಶಕ್ತಿದೇವತೆಗಳ ಉತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.


ನಗರದ ಶ್ರೀ ಮುತ್ತುಮಾರಮ್ಮ ದೇವಾಲಯದಲ್ಲಿ ಅಮ್ಮನವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯೊಂದಿಗೆ ಅಮ್ಮನವರು ಆವಾಹನೆಗೊಳಗಾದ ಅರ್ಚಕ ಮನೆಮನೆಯ ಬಾಗಿಲಲ್ಲಿ ನಿಂತು ಪೂಜೆ ಸಲ್ಲಿಸಿದ ಭಕ್ತರಿಗೆ ಆಶೀರ್ವದಿಸಿ ಮುನ್ನಡೆಯುತ್ತಿದ್ದರು.

ಹುಣಸೂರು-ಮಡಿಕೇರಿ ಹೆದ್ದಾರಿಯ ಹುಣಸೂರು ನಗರದ ಹೊರವಲಯದಲ್ಲಿರುವ ಮೂರೂರಮ್ಮ ದೇವಾಲಯದಲ್ಲಿ ವಿಜಯದಶಮಿಯ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. 9 ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಅರ್ಚಕ ನಾರಾಯಣಮೂರ್ತಿ ನೇತೃತ್ವದಲ್ಲಿ ಸಾಮೂಹಿಕ ದುರ್ಗಾಪೂಜೆ ನೆರವೇರಿಸಲಾಯಿತು. ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಧನ್ಯತಾ ಭಾವ ಮೆರೆದರು.

ನಗರದ ಮುತ್ತುಮಾರಮ್ಮ ದೇವಾಲಯದ ವಿಶೇಷವಾಗಿ ಅಲಂಕೃತಗೊಂಡ ಅಮ್ಮನವರು.
ನಗರದ ಮುತ್ತುಮಾರಮ್ಮ ದೇವಾಲಯದ ವಿಶೇಷವಾಗಿ ಅಲಂಕೃತಗೊಂಡ ಅಮ್ಮನವರು.

ನಗರದ ಪೌರಕಾರ್ಮಿಕರ ಕಾಲನಿಯ ಮಹಾಕಾಳಮ್ಮ ದೇವಿಯ ಉತ್ಸವಮೂರ್ತಿಯನ್ನು ಬೆಳ್ಳಿಪಲ್ಲಕ್ಕಿಯ ರಥದಲ್ಲಿರಿಸಿ ನಗರದಾದ್ಯಂತ ಭವ್ಯ ಮೆರವಣಿಗೆ ನಡೆಲಾಯಿತು. ಪೌರಕಾರ್ಮಿಕರು ಬಿಳಿಪಂಚೆ, ಅಂಗಿಯೊಂದಿಗೆ ಕೇಸರಿ ಶಲ್ಯತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಭಕ್ತರು ದೇವಿಗೆ ಹೂವುಹಣ್ಣು, ಕಾಯಿಯೊಂದಿಗೆ ಪೂಜೆ ಸಲ್ಲಿಸಿದರು.

ಕರಗ ಸಂಭ್ರಮ: ನಗರದ ಕಾಫಿ ವರ್ಕ್ಸ್ ರಸ್ತೆಯ ಮುನೇಶ್ವರಸ್ವಾಮಿ ದೇವಾಲಯದ ವತಿಯಿಂದ ವಿಜಯದಶಮಿ ಅಂಗವಾಗಿ ದೇವರ ಮುಖವಾಡ ಹೊತ್ತು ಕರಗ ಮಹೋತ್ಸವ ಆಚರಿಸಲಾಯಿತು. ಮುಖಂಡರಾದ ಎಚ್.ವೈ.ಮಹದೇವ್, ಪೆರುಮಾಳ್, ಲಕ್ಷ್ಮಣ್, ಮಾರ, ಅಶೋಕ್, ರಾಜಲಿಂಗಯ್ಯ ಸೇರಿದಂತೆ ಆಯಾದೇವಾಲಯಗಳ ಸಮಿತಿ ಸದಸ್ಯರು ಮತ್ತು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net