ನಗರದಲ್ಲಿ ಜಿಐ ಕ್ಯಾನ್ಸರ್ ಕ್ಲಿನಿಕ್ ಆರಂಭ

9
Published on

ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೊ ಎಂಟರಾಲಜಿಯಲ್ಲಿ ಜಿಐ ಕ್ಯಾನ್ಸರ್ ಕ್ಲಿನಿಕನ್ನು ಗುರುವಾರ ಪ್ರಸಿದ್ಧ ಆಂಕೊಲಾಜಿಸ್ಟ್ ಪದ್ಮಶ್ರೀ ಡಾ.ವಿಜಯಲಕ್ಷ್ಮೀ ದೇಶಮಾನೆ ಉದ್ಘಾಟಿಸಿದರು.

ಜಿಐ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಮೀಸಲಾಗಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಕ್ಲಿನಿಕ್ ಮೈಸೂರಿನ ಜನರಿಗೆ ಉಡುಗೊರೆಯಾಗಿದೆ. ಇದು ಜಾಗತಿಕ ಮಾನದಂಡಗಳನ್ನು ಪೂರೈಸುವ ವಿಶ್ವ

ದರ್ಜೆಯ ಕ್ಯಾನ್ಸರ್ ಆರೈಕೆ ಕೇಂದ್ರವಾಗಿದೆ ಎಂದು ಅವರು ಹೇಳಿದರು.

ಇಲ್ಲಿನ ಉನ್ನತ ತಂತ್ರಜ್ಞಾನ, ಹೆಚ್ಚು ತರಬೇತಿ ಪಡೆದ ತಜ್ಞ ವೈದ್ಯ ತಂಡವು ಪ್ರತಿ ರೋಗಿಗೂ ಉತ್ತಮ ಚಿಕಿತ್ಸೆ ನೀಡಲಿದೆ. ಅದು ರೋಗಿಗಳಿಗೆ ತಮ್ಮ ರೋಗವನ್ನು ಗುಣಪಡಿಸಲು ಉತ್ತಮ ಅವಕಾಶವನ್ನು ನೀಡುತ್ತದೆ ಎಂದರು.

ಎನ್.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ದುರ್ಗೇಶ್ ಮಾತನಾಡಿ, ಮೈಸೂರಿನಲ್ಲಿ ಹಲವಾರು ಕ್ಯಾನ್ಸರ್ ಆಸ್ಪತ್ರೆಗಳಿವೆಯಾದರೂ ಈ ಕೇಂದ್ರವು ಜಿಐ ಕ್ಯಾನ್ಸರ್‌ಗೆ ಬೇಕಾದ ಅಗತ್ಯವನ್ನು ಬಹಳ ಹಿಂದಿನಿಂದಲೂ ಗುರುತಿಸಿದೆ. ಜಿಐ ಕ್ಯಾನ್ಸರ್‌ಗಳ ಮೇಲೆ ನಿರ್ದಿಷ್ಟವಾಗಿ ಕೇಂದ್ರೀಕರಿಸಿದ ಸೌಲಭ್ಯಗಳ ವಿಶೇಷವಾದ ಆರೈಕೆಯ ಅಗತ್ಯವಿದೆ. ಇಂತಹ ಸಂಕೀರ್ಣ ಕಾಯಿಲೆಗಳು ಗಮನಾರ್ಹವಾಗಿ ಕೊರತೆಯನ್ನು ಹೊಂದಿವೆ. ಈ ರೀತಿಯ ಕಾಯಿಲೆಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಅಗತ್ಯವಾದ ಜ್ಞಾನವನ್ನು ಪಡೆಯಲು, ರೋಗಿಗಳು ಇಲ್ಲಿಯವರೆಗೆ ದೊಡ್ಡ, ನಗರಗಳಿಗೆ ಹೋಗಬೇಕಾಗಿತ್ತು. ಇದೀಗ ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೊ ಎಂಟರಾಲಜಿಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಕ್ಯಾನ್ಸರ್ ಚಿಕಿತ್ಸೆಯು ತಜ್ಞ ವೈದ್ಯರ ಪರಿಣತಿಯನ್ನು ಹೆಚ್ಚಾಗಿ ಅವಲಂಬಿಸಿದೆ. 3ಡಿ47 ಲ್ಯಾಪ್ರೋಸ್ಕೋಪಿ, ಫ್ರೋರೊಸೆನ್ಸ್ ಗೈಡೆಡ್ ಸರ್ಜರಿಯಂತಹ ಸುಧಾರಿತ ಸೌಲಭ್ಯಗಳು, ಲ್ಯಾಪ್ರೋಸ್ಕೋಪಿಕ್ ತಜ್ಞರ ತಂಡದೊಂದಿಗೆ ಈ ಕ್ಲಿನಿಕ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಿದೆ ಎಂದರು. ಡಾ. ಡಿ.ಸತೀಶ್, ಡಾ.ಸುದಿಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net