ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಅಳವಡಿಸಿರುವ ಗೇಟ್‌ವಾಲ್‌ಗಳ ಬಳಿ ಬಾಯಿ ತೆರೆದುಕೊಂಡಿರುವ ಮ್ಯಾನ್‌ಹೋಲ್‌ಗಳು / ಮಳೆನೀರು ಮಿಶ್ರಣವಾಗಿ ಪೈಪ್‌ಲೈನ್ ಮೂಲಕ ಮನೆಗಳಿಗೆ ಸೇರುತ್ತಿರುವ ಕೊಳಚೆ ನೀರು / ದುರಸ್ಥಿಗೆ ಸಾರ್ವಜನಿಕರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ನಗರದಲ್ಲಿ ಕುಡಿಯುವ ನೀರಿಗಾಗಿ ಅಳವಡಿಸಿರುವ ಪೈಪ್‌ಲೈನ್‌ಗಳ ಮ್ಯಾನ್‌ಹೋಲ್‌ಗಳು ಬಾಯಿ ತೆರೆದುಕೊಂಡಿದ್ದು, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಮಳೆ ನೀರು ಮ್ಯಾನ್‌ಹೋಲ್‌ನಲ್ಲಿ ಸೇರಿ ಪೈಪ್‌ಲೈನ್ ಮೂಲಕ ನಲ್ಲಿಗಳಿಗೆ ಸರಬರಾಜಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಜೊತೆಗೆ ಕೆಸರು ನೀರು ಸೇರುತ್ತಿವೆ ಎಂದು ಸ್ಥಳೀಯ ನಾಗರೀಕರು ಆರೋಪಿಸುತ್ತಿದ್ದಾರೆ.

ಯರ್‌ಗೋಳು ಕುಡಿಯುವ ನೀರು ಸರಬರಾಜಿಗಾಗಿ ನಗರದಲ್ಲಿ ಪೈಪ್‌ಲೈನ್‌ಗಳನ್ನು ಅಳವಡಿಸಿದ್ದಾರೆ. ನೀರು ಸಮರ್ಪಕವಾಗಿ ಬಡಾವಣೆಗಳಿಗೆ ಮತ್ತು ನಗರ ನಿವಾಸಿಗಳಿಗೆ ಒದಗಿಸುವ ಸಲುವಾಗಿ ಗೇಟ್‌ವಾಲ್‌ಗಳನ್ನು ಅಳವಡಿಸಿ ಮ್ಯಾನ್‌ಹೋಲ್‌ಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಮಳೆನೀರು ಮ್ಯಾನ್‌ಹೋಲ್ ಮೂಲಕ ಪೈಪುಗಳಲ್ಲಿ ಮಿಶ್ರಣವಾಗಿ ಮನೆಗಳಿಗೆ ಹೋಗುವಂತೆ ಆಗಿದೆ.

ನಗರದ ಎಂ.ಜಿ.ಚೌಕ್ ವೃತ್ತದಲ್ಲಿ ದೊಡ್ಡಪೇಟೆಗೆ ಹೋಗುವ ರಸ್ತೆಯಲ್ಲಿ ಯರಗೋಳ್ ನೀರಿನ ಪೈಪ್ ಅಳವಡಿಸುವ ಗೇಟ್‌ವಾಲ್ ದುರಸ್ಥಿ ಸಂದರ್ಭದಲ್ಲಿ ಸುತ್ತಲೂ ಹಳ್ಳ ತೋಡಿದ್ದು, ಅದನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ರಸ್ತೆಯಲ್ಲಿಯೇ ನೀರು ಹಳ್ಳಕ್ಕೆ ಸೇರಿ ಗೇಟ್‌ವಾಲ್‌ಗೆ ಅಳವಡಿಸಿರುವ ಮ್ಯಾನ್‌ಹೋಲ್ ಮೂಲಕ ಕೊಳಚೆ ನೀರು ಪೈಪ್‌ಲೈನ್ ಮೂಲಕ ಸರಬರಾಜಾಗಿ ಮನೆಗಳಿಗೆ ಸೇರುವಂತೆ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ೩ ದಿನಗಳ ಹಿಂದೆ ದುರಸ್ಥಿಗೆಂದು ಗೇಟ್‌ವಾಲ್ ಸುತ್ತಲೂ ಹಳ್ಳ ತೋಡಿದ್ದು, ಹಳ್ಳವನ್ನು ಮತ್ತೆ ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಕಳೆದ ೩ ದಿನಗಳಿಂದ ಸುರಿಯುತ್ತಿರುವ ಮಳೆನೀರು ಪೈಪ್‌ಲೈನ್ ಮೂಲಕ ಮನೆಗಳಿಗೆ ಹರಿಯುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎಂ.ಜಿ.ರಸ್ತೆ ಮತ್ತು ದೊಡ್ಡಪೇಟೆ ರಸ್ತೆ ಏಕಮುಖ ರಸ್ತೆಗಳಾಗಿರುವ ಕಾರಣ ವೃತ್ತಗಳಲ್ಲಿ ಏಕಮುಖದ ನಾಮಫಲಕಗಳು ಇಲ್ಲದೇ ಇರುವುದರಿಂದ ಹಳ್ಳಿಗಳಿಂದ ಬರುವ ನಾಗರೀಕರು ಏಕಮುಖ ರಸ್ತೆ ಎಂಬುದು ಗೊತ್ತಾಗದೆ ವಾಹನಗಳನ್ನು ಚಲಾಯಿಸಿ ಪೋಲಿಸರ ಕೈಗೆ ಸಿಕ್ಕಿಹಾಕಿಕೊಂಡು ದಂಡ ಕಟ್ಟುವಂತೆ ಆಗುತ್ತಿದೆ. ಪುರಸಭೆಯ ಅಧಿಕಾರಿಗಳು ನಾಮಫಲಕಗಳನ್ನು ಅಳವಡಿಸಬೇಕಾಗಿದೆ ಎಂದು ಎಂ.ಜಿ.ರಸ್ತೆ ಮತ್ತು ದೊಡ್ಡಪೇಟೆ ರಸ್ತೆಯ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

ಸಂಜೆಯಾದರೆ ಅಂಗಡಿಗಳಿAದ ಹೊರಬೀಳುವ ತ್ಯಾಜ್ಯವನ್ನು ರಸ್ತೆಗೆ ಸುರಿದು ಹೋಗುತ್ತಿದ್ದಾರೆ. ವೃತ್ತಗಳಲ್ಲಿ ಸಿಸಿ ಕ್ಯಾಮರಾ ಮತ್ತು ಹೈಮಾಸ್ಟ್ ದೀಪಗಳನ್ನು ಅಳವಡಿಸಿದರೆ ಸಿಕ್ಕಿಬೀಳುತ್ತೇವೆ ಎಂದು ಕಸದ ತ್ಯಾಜ್ಯ ಸುರಿಯುವುದು ತಪ್ಪುತ್ತದೆ.

ಕಳೆದ ನಾಲ್ಕೆöÊದು ದಿನಗಳಿಂದ ನಗರದಲ್ಲಿ ಬೀಳುತ್ತಿರುವ ಮಳೆಯಿಂದ ಚರಂಡಿಗಳು ಮತ್ತು ರಾಜಕಾಲುವೆಗಳಲ್ಲಿ ತ್ಯಾಜ್ಯ ತುಂಬಿದ್ದು, ನೀರು ರಸ್ತೆಗಳಲ್ಲಿ ಹರಿಯುವಂತೆ ಆಗಿದೆ. ಹಾಗೂ ಒಳಚರಂಡಿಯ ಮ್ಯಾನ್‌ಹೋಲ್‌ಗಳು ಅಲ್ಲಲ್ಲಿ ಬಾಯಿ ತೆರೆದುಕೊಂಡು ಮಳೆನೀರು ಒಳಚರಂಡಿಯ ಮ್ಯಾನ್‌ಹೋಲ್‌ಗಳ ಮೂಲಕ ಹರಿಯುವಂತೆ ಆಗಿದೆ. ಮಳೆಯ ನೀರಿನ ಜೊತೆಗೆ ತ್ಯಾಜ್ಯ ಸೇರಿದರೆ ಮ್ಯಾನ್‌ಹೋಲ್‌ಗಳು ಬಂದಾಗುವ ಸಾಧ್ಯತೆ ಇದೆ. ಬಾಯಿ ತೆರೆದುಕೊಂಡಿರುವ ಮ್ಯಾನ್‌ಹೋಲ್‌ಗಳನ್ನು ಭದ್ರಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ವಿಶೇಷ ತಂಡದ ರಚನೆ :

ನಗರದಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ರಾಜಕಾಲುವೆ ಮತ್ತು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮತ್ತೆ ಮನೆಗಳಿಗೆ ಬರದಂತೆ ನೋಡಿಕೊಳ್ಳಲು ನಗರಸಭೆಯ ಪೌರಕಾರ್ಮಿಕರ ೮ ಜನರ ತಂಡವನ್ನು ರಚನೆ ಮಾಡಲಾಗಿದೆ. ಈ ತಂಡ ಎಲ್ಲೆಲ್ಲಿ ನೀರು ಬ್ಲಾಕ್ ಆಗುತ್ತಿದೆ, ಅವುಗಳನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಮತ್ತು ನಗರಸಭೆಯ ಜೆಸಿಬಿ ಮೂಲಕ ಚರಂಡಿಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಖಾಸಗಿ ಜೆಡಿಬಿಯನ್ನು ಪಡೆದುಕೊಳ್ಳುವಂತೆ ಪೌರಕಾರ್ಮಿಕರಿಗೆ ಸೂಚಿಸಲಾಗಿದೆ. ಪೌರಕಾರ್ಮಿಕರಿಗೆ ಹೈ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ. ಮಳೆ ಹೆಚ್ಚಾದರೆ ರಸ್ತೆಗೆ ಇಳಿಯುವಂತೆ ಸೂಚನೆ ನೀಡಿರುವುದಾಗಿ ನಗರಸಭೆಯ ಆಯುಕ್ತ ನವೀನ್‌ಚಂದ್ರ ತಿಳಿಸಿದ್ದಾರೆ.

ಕೋಟ್

ನಗರದಲ್ಲಿ ಬಾಯಿತೆರೆದುಕೊಂಡಿರುವ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳ ಹಾಕುವ ಕೆಲಸ ಮಾಡಲಾಗತ್ತಿದೆ. ಕುಡಿಯುವ ನೀರಿನ ಪೈಪ್‌ಲೈನ್‌ಗಲ್ಲಿ ಗೆಟ್‌ವಾಲ್‌ಗಾಗಿ ಮ್ಯಾನ್‌ಹೋಲ್‌ಗಳನ್ನು ಬಿಡಲಾಗಿದೆ. ಎಂ.ಜಿ.ಚೌಕದಲ್ಲಿ ದುರಸ್ಥಿಗಾಗಿ ಮ್ಯಾನ್‌ಹೋಲ್ ಸುತ್ತಲೂ ಹಳ್ಳ ತೋಡಲಾಗಿದೆ. ಅದನ್ನು ಮುಚ್ಚಿಸುವ ಕೆಲಸ ಮಾಡಲಾಗುವುದು. ಅದರ ಮೂಲಕ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರದಂತೆ ಕ್ರಮಕೈಗೊಳ್ಳಲಾಗುವುದು.

-ನವೀನ್‌ಚಂದ್ರ, ನಗರಸಭೆ ಆಯುಕ್ತ.

ಚಿತ್ರ ೧೯ ಕೆ.ಎಲ್.ಆರ್. ೦೧ : ನಗರದ ಎಂ.ಜಿ.ಚೌಕದಲ್ಲಿ ಯರಗೋಳ್ ನೀರಿನ ಪೈಪ್‌ಲೈನ್‌ಗೆ ಅಳವಡಿಸಿರುವ ಗೇಟ್‌ವಾಲ್ ಸುತ್ತಲೂ ಹಳ್ಳ ಬಿದ್ದಿದ್ದು, ಮಳೆ ನೀರು ಪೈಪ್‌ಲೈನ್‌ಗೆ ಸೇರುವಂತೆ ಇರುವ ಚಿತ್ರ

ಚಿತ್ರ ೧೯ ಕೆ.ಎಲ್.ಆರ್. ೦೧ಎ : ನವೀನ್‌ಚಂದ್ರ, ನಗರಸಭೆ ಆಯುಕ್ತರು ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net