ನಗರದ ವಿವಿಧ ವಾರ್ಡುಗಳಿಗೆ ನಗರಸಭಾ ನೂತನ ಅಧ್ಯಕ್ಷ ಆನಂದ್ ರೆಡ್ಡಿ ಬಾಬುಭೇಟಿ

9CBP5
Published on

ಚಿಕ್ಕಬಳ್ಳಾಪುರ : ನಗರಸಭಾ ನೂತನ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಸೋಮವಾರ ನಗರದ ವಿವಿಧ ವಾರ್ಡುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿನ ದರ್ಗಾ ಮೊಹಲ್ಲಾ ರಸ್ತೆ, ಪ್ರಶಾಂತ ನಗರ, ಟಿ.ಜಿ.ಟ್ಯಾಂಕ್ ರಸ್ತೆ ಸೇರಿ ವಿವಿಧೆಡೆ ರಸ್ತೆ, ಚರಂಡಿಗಳ ಶುಚಿತ್ವ, ಮನೆ-ಮನೆ ಕಸ ಸಂಗ್ರಹ, ಕರೊನಾ ಅರಿವು ಮೂಡಿಸುವ ಬ್ಯಾನರ್ ಗಳ ಅಳವಡಿಕೆಯ ಬಗ್ಗೆ ಪರಿಶೀಲಿಸಿದರು.

ಜಿಲ್ಲಾ ಕೇಂದ್ರದಲ್ಲಿನ ಪ್ರತಿದಿನ ವಾರ್ಡ್‌ಗಳ ಭೇಟಿ ಮಾಡಿ ಪರಿಶೀಲಿಸಲಾಗುತ್ತದೆ. ಇದರಿಂದ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲು, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಿದೆ ಎಂದರು.

ಚರಂಡಿ ಮತ್ತು ರಸ್ತೆಗಳು ಸದಾ ಸ್ವಚ್ಛವಾಗಿರಬೇಕು. ಸುತ್ತಲು ಒಳ್ಳೆಯ ನೈರ್ಮಲ್ಯದ ವಾತಾವರಣ ಇರಬೇಕು. ಆಗ ಮಾತ್ರ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಈಗಾಗಲೇ ನಗರದಲ್ಲಿ ಮನೆಗಳಿಂದಲೇ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ, ವಿಲೇವಾರಿ ಮಾಡಲಾಗುತ್ತಿದೆ. ನಗರಸಭೆಗೆ ವಿತರಿಸಬೇಕು. ಎಲ್ಲೆಂದರಲ್ಲಿ ಬಿಸಾಡಬಾರದು. ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಪೌರಾಯುಕ್ತ ಲೋಹಿತ್ ನಗರಸಭಾ ಸದಸ್ಯರಾದ ಮಂಜುನಾಥ ಚಾರಿ, ಗ್ಯಾಸ್ ನಾಗರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net