ನಗರದ ರಸ್ತೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮ, ರಾಜಕೀಯ ಭಾಷಣ, ಪ್ರತಿಭಟನೆಗಳಿಗೆ ಬಳಸುವುದರಿಂದ ಟ್ರಾಫಿಕ್ ಜಾಮ್ / ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ / ಪ್ರತ್ಯೇಕ ಜಾಗ ಮೀಸಲಿಡಲು ಸಾರ್ವಜನಿಕರ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಇತ್ತೀಚೆಗೆ ಕೋಲಾರ ನಗರದಲ್ಲಿ ತಿಂಗಳಲ್ಲಿ ಮೂರು ನಾಲ್ಕು ಬಾರಿ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ದೊಡ್ಡ ದೊಡ್ಡ ವೇದಿಕೆಗಳನ್ನು ಹಾಕಿ ಕಾರ್ಯಕ್ರಮಗಳನ್ನು ಮಾಡುವುದರಿಂದ ಸಂಚಾರಿ ಸುವ್ಯವಸ್ಥೆಗೆ ಅಡ್ಡಿ ಆತಂಕಗಳು ಎದುರಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ.

ಕೋಲಾರ ರಾಜಧಾನಿಗೆ ಕೂಗಳತೆ ದೂರದಲ್ಲಿದ್ದು, ಕೋಲಾರ ನಗರದ ರಸ್ತೆಗಳು ಅಗಲೀಕರಣಗೊಂಡಿಲ್ಲ. ನಗರದ ಒಳಭಾಗದಲ್ಲಿರುವ ರಿಂಗ್ ರೋಡ್ ಹೊರತುಪಡಿಸಿದರೆ ಯಾವುದೇ ರಸ್ತೆಗಳು ಅಭಿವೃದ್ಧಿಯೂ ಕಂಡಿಲ್ಲ. ಕೆಲವು ದಿನಗಳ ಹಿಂದೆ ಬಂಗಾರಪೇಟೆಯಿAದ ಕೋಲಾರ ಪ್ರವೇಶ ಮಾಡುವ ರಸ್ತೆ, ಬಂಗಾರಪೇಟೆ ವೃತ್ತ, ಡ್ಯೂಂಲೈಟ್ ವೃತ್ತ, ಕ್ಲಾಕ್‌ಟವರ್, ಬಸ್‌ಸ್ಟಾಂಡ್ ವೃತ್ತ, ಮೆಕ್ಕೆ ವೃತ್ತ, ಇಟಿಸಿಎಂ ವೃತ್ತ ಹಾಗೂ ಮೆಕ್ಕೆ ವೃತ್ತದಿಂದ ನ್ಯಾಯಾಂಗ ವೃತ್ತ ಮತ್ತು ಮೆಕ್ಕೆ ವೃತ್ತದಿಂದ ಚಿಕ್ಕಬಳ್ಳಾಪುರ ರಸ್ತೆ ಹಾಗೂ ಕ್ಲಾಕ್‌ಟವರ್‌ನಿಂದ ಕೋಲಾರ ಪ್ರವೇಶ ಮಾಡುವ ರಾಷ್ಟಿçÃಯ ಬೈಪಾಸ್ ರಸ್ತೆಯ ತನಕ ಜೋಡಿ ರಸ್ತೆಗಳಾದವು.

ಸದ್ಯಕ್ಕೆ ಈ ರಸ್ತೆಗಳೇ ನಗರದ ರಿಂಗ್ ರೋಡ್ ರಸ್ತೆಗಳಾಗಿವೆ. ಇದೇ ರಸ್ತೆಗಳಲ್ಲಿ ಪ್ರತಿಭಟನೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಸ್ತೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಒಂದು ರಸ್ತೆಯ ವೃತ್ತದಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ ಕೋಲಾರ ನಗರದ ಎಲ್ಲಾ ರಸ್ತೆಗಳು ಟ್ರಾಫಿಕ್‌ಜಾಮ್ ಆಗುತ್ತವೆ.

ಇದಕ್ಕಾಗಿ ಪೋಲಿಸರನ್ನು ನಿಯೋಜನೆಯನ್ನು ಮಾಡಿರುತ್ತಾರೆ. ಅಪ್ಪಿತಪ್ಪಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ವಾಹನಗಳು ನಗರ ಪ್ರವೇಶ ಮಾಡಬೇಕಾಗಿ ಬಂದಲ್ಲಿ ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಪರಿಸ್ಥಿತಿ ಬರುತ್ತದೆ. ಜನಪ್ರತಿನಿಧಿಗಳು, ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಮಾಯಕ ಸಾರ್ವಜನಿಕರು ಎಲ್ಲಾ ನಿರ್ಬಂಧನಗಳನ್ನು ಅನುಭವಿಸುವಂತಹ ಪರಿಸ್ಥಿತಿ ಬರುತ್ತದೆ. ಅಂತಹವರಿಗೆ ಪೋಲಿಸರು ಲಾಠಿ ರುಚಿಯನ್ನು ಸಹ ತೋರಿಸುತ್ತಾರೆ.

ಇತ್ತೀಚೆಗೆ ಡ್ಯೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತ, ಎಸ್‌ಎನ್‌ಆರ್ ವೃತ್ತದಲ್ಲಿ ಹಬ್ಬಹರಿದಿಗಳಲ್ಲಿ ಹಾಗೂ ರಾಜಕೀಯ ಸಮಾವೇಶಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೃತ್ತಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕ್ಲಾಕ್‌ಟವರ್‌ನಲ್ಲಿ ಮತ್ತೊಂದು ಕೋಮಿನವರು ವೇದಿಕೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಬಸ್‌ಸ್ಟಾಂಡ್ ವೃತ್ತ, ಮೆಕ್ಕೆ ವೃತ್ತಗಳಲ್ಲಿ ರಾಜಕೀಯ ಪಕ್ಷಗಳಿಂದ, ಸಂಘ ಸಂಸ್ಥೆಗಳವರು ಪ್ರತಿಭಟನೆಗಳನ್ನು ನಡೆಸಲು ವೃತ್ತಗಳನ್ನು ಬಳಸಿಕೊಳ್ಳುತ್ತಿದ್ದು, ಇದರಿಂದ ಗಂಟೆಗಟ್ಟಲೆ ಟ್ರಾಫಿಕ್‌ಜಾಮ್ ಆಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾಜಕೀಯ ಭಾಷಣಕ್ಕೆ ವೇದಿಕೆಗಳನ್ನು ನಿರ್ಮಾಣ ಮಾಡಿದರೆ ಸುಮಾರು ೨ ರಿಂದ ೩ ಗಂಟೆಗಳ ಕಾಲ ರಸ್ತೆಗಳನ್ನು ಬಂದ್ ಮಾಡುತ್ತಾರೆ. ಡ್ಯೂಂಲೈಟ್ ವೃತ್ತ, ಬಂಗಾರಪೇಟೆ ವೃತ್ತ, ಎಸ್.ಎನ್.ಆರ್.ಆಸ್ಪತ್ರೆ ವೃತ್ತದಲ್ಲಿ ಆಸ್ಪತ್ರೆಗಳು ಹೆಚ್ಚಾಗಿರುವುದರಿಂದ ಆಂಬುಲೆನ್ಸ್ ಸೇರಿದಂತೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡುವಂತಹ ಪರಿಸ್ಥಿತಿ ಉಂಟಾಗಿವೆ.

ಇದಲ್ಲದೆ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಡಿಜಿಗಳನ್ನು ಅಳವಡಿಸುವುದರಿಂದ ಆಸ್ಪತ್ರೆಗಳಿಗೆ ದಾಖಲಾಗಿರುವ ರೋಗಿಗಳಿಗೆ ಡಿಜಿಗಳಿಂದ ಬರುವ ಕರ್ಕಷ ಶಬ್ದಗಳು ರೋಗಿಗಳ ಪ್ರಭಾವವು ಬೀರುವಂತೆ ಆಗಿದೆ.

ಕೋಟ್

ಕೋಲಾರದಲ್ಲಿ ರಸ್ತೆಗಳೇ ಕಿರಿದಾಗಿದ್ದು, ಇರುವ ರಸ್ತೆಗಳನ್ನು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳಿಗೆ, ಪ್ರತಿಭಟನೆಗಳಿಗೆ, ರಾಜಕೀಯ ಸಭೆ ಸಮಾರಂಭಗಳಿಗೆ ಅವಕಾಶ ನೀಡುವುದರಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತದೆ. ನಗರಸಭೆ ಮತ್ತು ಪೋಲಿಸ್ ಇಲಾಖೆಯವರು ಇಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಜಿಲ್ಲಾಡಳಿತ ಇದಕ್ಕಾಗಿ ಒಂದು ಜಾಗವನ್ನು ನಿಗಧಿಪಡಿಸಬೇಕು. ರಸ್ತೆಗಳು ಇರುವುದು ಸಾರ್ವಜನಿಕರ ಓಡಾಟಕ್ಕಾಗಿ ಕಾರ್ಯಕ್ರಮಗಳಿಗೆ ಅಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

-ಮುನಿವೆಂಕಟೇಶ್, ಹಿರಿಯ ನಾಗರೀಕರು. ಕೋಲಾರ

ಚಿತ್ರ ೦೧ ಕೆ.ಎಲ್.ಆರ್. ೦೭ : ಮುನಿವೆಂಕಟೇಶ್, ಹಿರಿಯ ನಾಗರೀಕರು. ಕೋಲಾರ ರವರ ಭಾವಚಿತ್ರ

ಚಿತ್ರ ೦೧ ಕೆ.ಎಲ್.ಆರ್. ೦೭ಎ : ರಸ್ತೆಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಾಣಗೊಂಡಿರುವುದು.

ಕೋಟ್

ಕೋಲಾರ ನಗರ ಬೆಳೆದಂತೆ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ಇರುವ ಕಿರಿದಾದ ರಸ್ತೆಗಳನ್ನೇ ಪ್ರತಿಭಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ ರಾಜಕೀಯ ಭಾಷಣಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅನುಮತಿ ಕೊಡುವವರು ತಪ್ಪಿತಸ್ಥರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಇದಕ್ಕಾಗಿಯೇ ನಗರಸಭೆಯವರು ಪ್ರತ್ಯೇಕ ಜಾಗವನ್ನು ನಿಗಧಿಪಡಿಸಬೇಕು. ಮುಖ್ಯರಸ್ತೆಗಳನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಲು ಅವಕಾಶ ನೀಡಬಾರದು.

-ಶಂಕರಪ್ಪ, ನಿವೃತ್ತ ಪ್ರಾಧ್ಯಾಪಕರು.

ಕೋಟ್

ರಸ್ತೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲು ಪ್ರತಿಭಟನೆ ನಡೆಸಲು ನಗರಸಭೆಯಿಂದ ಅವಕಾಶ ಕೊಡುವುದಿಲ್ಲ. ನಮಗೆ ಕೊಡಲು ಅಧಿಕಾರವೂ ಇಲ್ಲ. ನಗರಸಭೆ ಜಾಗ ಇದ್ದಲ್ಲಿ ಮಾತ್ರ ನಾವು ಅನುಮತಿ ನೀಡುತ್ತೇವೆ. ರಸ್ತೆ ಸುವ್ಯವಸ್ಥೆ ಕಾನೂನು ಪೋಲಿಸ್ ಇಲಾಖೆಗೆ ಇರುವುದು. ಸರ್ಕಾರಿ ಶಾಲಾ ಕಾಲೇಜು ಆವರಣಗಳಲ್ಲಿಯೂ ಅನುಮತಿ ನೀಡುವುದು ನಾವಲ್ಲ. ಆ ಸಂಸ್ಥೆಗಳ ಮುಖ್ಯಸ್ಥರು ಸ್ವಚ್ಛತೆ, ನೀರು ಮುಂತಾದವುಗಳು ಮಾತ್ರ ನಾವು ಒದಗಿಸುತ್ತೇವೆ.

-ಪ್ರಸಾದ್, ನಗರಸಭಾ ಆಯುಕ್ತರು, ಕೋಲಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net