ನಗರದ ಕೇಂದ್ರ ಕಾರಾಗೃಹದಲ್ಲಿ ಶೋಧ

Crime_20250618234849871.jpg
Published on

ನಗರದ ಕೇಂದ್ರ ಕಾರಾಗೃಹದ ಮೇಲೆ ಮೈಸೂರು ನಗರ ಪೊಲೀಸರು ಬುಧವಾರ ಬೆಳಗ್ಗೆ ದಿಢೀರ್ ದಾಳಿ ನಡೆಸಿ ಶೋಧಿಸಿದ್ದಾರೆ. ತಪಾಸಣೆ ವೇಳೆ ಯಾವುದೇ ಅಕ್ರಮ ಮತ್ತು ಮಾದಕ ವಸ್ತು ಪತ್ತೆಯಾಗಿಲ್ಲ.

ಡಿಸಿಪಿಗಳಾದ ಎಂ.ಮುತ್ತುರಾಜು ಮತ್ತು ಸುಂದರ್ ರಾಜ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಕಾರಾಗೃಹದಲ್ಲಿ ಮಹಿಳೆಯರು ಮತ್ತು ಪುರುಷರ ಶೌಚಗೃಹ, ಅಡುಗೆ ಮನೆ ತಪಾಸಣೆ ನಡೆಸಿದರು.

ಮೈಸೂರು ನಗರ ಕಮಾಂಡೋ ಪಡೆಯೊಂದಿಗೆ ಶ್ವಾನದಳ, ವಿಧ್ವಂಸಕ ಕೃತ್ಯ ತಪಾಸಣಾ ತಂಡ, ನರಸಿಂಹರಾಜ ವಿಭಾಗದ ಎಸಿಪಿ, ಸಿಸಿಬಿಯ ಎಸಿಪಿ ಮತ್ತು ಮಂಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net