

ನಗರ ಪಾಲಿಕೆಯಿಂದ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ ವಾಣಿಜ್ಯ ಕಟ್ಟಡ ಮಾಲೀಕರು ಉದ್ಯಮ ರಹದಾರಿ ಪಡೆಯಲು ಸಹ ಸಮಸ್ಯೆಯಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಆರ್.ಜಯಕುಮಾರ್ ದೂರಿದರು.
ದುಪ್ಪಟ್ಟು ತೆರಿಗೆ ವಿಧಿಸುತ್ತಿರುವುದರಿಂದ ಬಡಜನತೆಗೆ ಹೊರೆಯಾಗಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಹೊರೆ ತಪ್ಪಿಸಲು ಮುಂದಾಗಬೇಕು. ಈ ಕುರಿತು ತಾವು ಶಾಸಕ ಟಿ.ಎಸ್.ಶ್ರೀವತ್ಸ ಅವರ ಗಮನ ಸೆಳೆದಿದ್ದು, ಅವರು ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದಾರೆ. ಇದೇ ರೀತಿಯ ಮನವಿಯನ್ನು ಶಾಸಕ ಕೆ. ಹರೀಶ್‌ಗೌಡ ಅವರಿಗೂ ಮಾಡಲಿದ್ದು, ಅವರು ಸಹ ಗಮನಹರಿಸಬೇಕು. ಜತೆಗೆ ನಗರದ ಜನತೆ ಸಹ ಇದರ ವಿರುದ್ಧ ಹೋರಾಟ ಮಾಡಬೇಕು ಎದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ವಕೀಲ ಹೇಮಂತ್‌ಕುಮಾರ್ ಇದ್ದರು.