ನಕಲಿ ಹೋರಾಟಗಾರರಿಂದ ಚಂದಾ ವಸೂಲಿ

raised-fist-icon-hand-protest-strike-fight-vector-7513463
Published on

ದೇವನಹಳ್ಳಿ ಭೂಸ್ವಾಧೀನ ರದ್ದು ಪಡಿಸಿರುವುದಾಗಿ ಸರ್ಕಾರ ತಿಳಿಸಿದೆ. ಇದಕ್ಕೆ ಸುಮಾರು 1192 ದಿನ ನಿಜವಾದ ರೈತರು ನಡೆಸಿದ ಹೋರಾಟ ಕಾರಣವಾಗಿದೆ. ಆದರೆ ಕೆಲವು ನಕಲಿ ರೈತ ಹೋರಾಟಗಾರರು ಇದರ ಖ್ಯಾತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಬಣದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆರೋಪಿಸಿದರು.

ದೇವನಹಳ್ಳಿಗೆ ಹೋರಾಟಕ್ಕೆಂದು ವಲಸೆ ಹೋದ ಈ ಭಾಗದ ರೈತ ಹೋರಾಟಗಾರರು ಅಲ್ಲಿನ ರೈತರಿಂದಲೂ ಚಂದಾ ವಸೂಲಿ ಮಾಡಿದ್ದಾರೆ ಎಂಬ ಆರೋಪವಿದೆ. ದೇವನಹಳ್ಳಿ ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಕುಳಗಳು, ಉದ್ಯಮಿಗಳು, ಸಿನಿಮಾ ತಾರೆಯರು ಹೊಂದಿದ್ದಾರೆ. ಈಗ ಕೆಲವು ನಕಲಿ ಹೋರಾಟಗಾರರು ಒಂದು ವೇಳೆ ಹೆಚ್ಚಿನ ಬೆಲೆ ನೀಡಿದರೆ ಅಲ್ಲಿನ ರೈತರು ಭೂಮಿ ನೀಡುತ್ತಾರೆ ಎಂಬ ಹೇಳಿಕೆ ನೀಡಿರುವುದು ಖಂಡನೀಯ. ಇದು ಈಗಾಗಲೇ ಅಲ್ಲಿ ಭೂಮಿ ಹೊಂದಿರುವವರಿಗೆ ಜಮೀನು ಕಬಳಿಸುವಂತೆ ಮಾಡುವ ಯತ್ನವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರವಿಕುಮಾರ್, ಪುಟ್ಟಸ್ವಾಮಿ ನಾಯಕ, ಲೋಕೇಶ್ ನಾಯಕ್, ಕೆಂಪರಾಜು ಹಾಗೂ ಕಾಳಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net