

ಮೈಸೂರು: ನಕಲಿ ನಾಣ್ಯ ನೀಡಿ 30 ಲಕ್ಷ ರೂ. ಹಣವನ್ನು ತಂದೆ-ಮಗಳು ವಂಚಿಸಿದ್ದಾರೆ ಎಂದು ಆರೋಪಿಸಿ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ನಿವಾಸಿ ಮಂಜು ಎಂಬುವರು ನೀಡಿದ ದೂರಿನ ಮೇರೆಗೆ ಮಂಡ್ಯ ಜಿಲ್ಲೆ ಗರುಡಾಪುರ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಸ್ವಾಮೀಜಿ ಹಾಗೂ ಆತನ ಪುತ್ರಿ ಪುಷ್ಪ ವಿರುದ್ದ ವಂಚನೆಯ ಪ್ರಕರಣ ದಾಖಲಾಗಿದೆ.
ಕೃಷ್ಣಪ್ಪ ಸ್ವಾಮೀಜಿ ಮತ್ತು ಪುಷ್ಪ ಅವರು ಅರ್ಧ ಕೆಜಿ ಚಿನ್ನದ ನಾಣ್ಯವನ್ನು ನೀಡುವುದಾಗಿ ಹೇಳಿ ಮನೆಗೆ ಕರೆಯಿಸಿಕೊಂಡು 30 ಲಕ್ಷ ರೂ. ಹಣವನ್ನು ಪಡೆದಿದ್ದು, ಬಳಿಕ ಯಾಮಾರಿಸಿ ನಕಲಿ ಚಿನ್ನದ ನಾಣ್ಯವನ್ನು ನೀಡಿ ಹಣವನ್ನು ಪಡೆದು ಪರಾರಿಯಾಗುವ ಮೂಲಕ ವಂಚಿಸಿದ್ದಾರೆ ಎಂದು ಮಂಜು ಅವರು ದೂರಿನಲ್ಲಿ ತಿಳಿಸಿದ್ದಾರೆ.