ನ.3ರಂದು ಅಡ್ಡಪಲ್ಲಕ್ಕಿ ಮಹೋತ್ಸವ

16 bir 1 book
ಬೀರೂರಿನಲ್ಲಿ ನಡೆಯಲಿರುವ ಪಂಚಪೀಠಾಧೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ದೇವಾಲಯ ಹಾಗೂ ಮಂಗಲ ಮಂದಿರ ಉದ್ಘಾಟನೆ ಆಹ್ವಾನ ಪತ್ರಿಕೆಯನ್ನು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಬಿಡುಗಡೆಗೊಳಿಸಿದರು. ಶ್ರೀ ರುದ್ರಮುನಿ ಶಿವಾಚಾರ್ಯ, ಎಚ್.ಎಂ.ಲೋಕೇಶ್, ಬೀರೂರು ದೇವರಾಜ್, ಮರುಳಸಿದ್ದಾರಾಧ್ಯ, ಕುಮಾರಶಾಸಿ, ಎಂ.ಎ.ರುದ್ರೇಶ್, ಜಿ.ಪಿ.ನವೀನ್ ಇತರರಿದ್ದರು.
Published on

ಬೀರೂರು: ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರ ಉದ್ಘಾಟನೆ, ಶ್ರೀ ಚೌಡೇಶ್ವರಿ ನೂತನ ದೇವಾಲಯ ಪ್ರಾರಂಭೋತ್ಸವ, ಶ್ರೀ ಚೌಡೇಶ್ವರಿ ದೇವಿ ನೂತನ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಜಗದ್ಗುರು ಪಂಚಪೀಠಾಧೀಶ್ವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಬುಧವಾರ ಬಿಡುಗಡೆಗೊಳಿಸಿದರು.

ನ.2ರಂದು ಗುರು ಪ್ರಾರ್ಥನೆ, ಶ್ರೀ ಮಹಾಗಣಪತಿ ಪೂಜೆ, ಸ್ವಸ್ತಿಪುಣ್ಯಾಹವಾಚನ, ಪಂಚಗವ್ಯಸಾಧನ, ದೇವನಾಂದಿ, ಆಚಾರ್ಯಾದಿಋತ್ವಿಗ್ವರಣ, ವಾಸ್ತುಮಂಡಲಾರಾಧನೆ, ಅಸರಾಜ, ರಕ್ಷೋಘ್ನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ. ನ.3 ರಂದು ಪೀಠಸಂಸ್ಕಾರ, ಶ್ರೀ ಚೌಡೇಶ್ವರಿದೇವಿ ನೂತನ ವಿಗ್ರಹಕ್ಕೆ ಅಷ್ಟಬಂಧನ, ಪ್ರಾಣಪ್ರತಿಷ್ಠೆ ಕ್ಷೀರಸಮರ್ಪಣೆ, ಪ್ರತಿಷ್ಠಾಂಗ ದೇವಾಲಯ ಶಿಖರ ಕಲಶಾರೋಹಣ, ದುರ್ಗಾಹೋಮ, ಜಯಾದಿಪ್ರಾಯಶ್ಚಿತ ಹೋಮ, ಪೂರ್ಣಾಹುತಿ, ಶ್ರೀ ಚೌಡೇಶ್ವರಿ ಅಮ್ಮನವರಿಗೆ ಹರಿದ್ರಾಲೇಪನ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದ ಬಳಿಕ ನೂತನ ಮಂಗಲ ಮಂದಿರದಲ್ಲಿ ಗಿರಿಜಾ ಕಲ್ಯಾಣ ಹಾಗೂ ಸಾಮೂಹಿಕ ವಿವಾಹ ಮತ್ತು ಶಿವದೀಕ್ಷಾ ಕಾರ್ಯಕ್ರಮ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು ಶ್ರೀ ಚೌಡೇಶ್ವರಿ ದೇವಾಲಯ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮಂದಿರ ಉದ್ಘಾಟನೆ ನೆರವೇರಿಸುವರು.

ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ನ.3ರ ಬೆಳಗ್ಗೆ 9.30ಕ್ಕೆ ಪಟ್ಟಣದ ಕೆ.ಎಲ್.ಕೆ ಆಟದ ಮೈದಾನದಲ್ಲಿ ಆರಂಭಗೊಂಡು ಶ್ರೀ ರಂಭಾಪುರಿ ಶಾಖಾ ಮಠದವರೆಗೆ ಸಾಗಲಿದೆ. ಮಧ್ಯಾಹ್ನ 12.30ಕ್ಕೆ ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಧರ್ಮ ಜಾಗೃತಿ ಸಮಾರಂಭ ಶ್ರೀ ರಂಭಾಪುರಿ ಖಾಸಾ ಪೀಠದ ಶ್ರೀ ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕ ವೈಎಸ್‌ವಿ ದತ್ತ ಉಪಸ್ಥಿತರಿರಲಿದ್ದಾರೆ. ವಿವಿಧ ಶಾಖಾ ಮಠಗಳ ಶಿವಾಚಾರ್ಯರ ಸಮ್ಮುಖದಲ್ಲಿ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net