ನ.1 ರಿಂದ ಕಾರ್ತಿಕ ಮಾಸದ ಪೂಜೆ

ನ.1 ರಿಂದ ಕಾರ್ತಿಕ ಮಾಸದ ಪೂಜೆ
Madeshwara
Published on

ನಗರದ ಲಷ್ಕರ್ ಮೊಹಲ್ಲಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನ.1ರಿಂದ 11ರವರೆಗೆ 47ನೇ ವರ್ಷದ ಕಾರ್ತಿಕ ಮಾಸದ ಪೂಜಾ ಮಹೋತ್ಸವ, 26ನೇ ವರ್ಷದ ಮಹಾ ಕುಂಭಾಭಿಷೇಕ ಮತ್ತು 10ನೇ ವರ್ಷದ ಹಾಲರವಿ ಸೇವೆ ಆಯೋಜಿಸಲಾಗಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುರೇಶ್‌ಬಾಬು ತಿಳಿಸಿದರು.

ನ.1ರ ದೀಪಾವಳಿ ಹಬ್ಬದಂದು ಬೆಳಗ್ಗೆ 9ಕ್ಕೆ ದೇವಸ್ಥಾನದಲ್ಲಿ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ನ.8ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರ ಆಯೋಜಿಸಿದ್ದು, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಂಸದ ಸುನೀಲ್ ಬೋಸ್, ಶಾಸಕರಾದ ಕೆ.ಹರೀಶ್ ಗೌಡ, ತನ್ವೀರ್ ಸೇಠ್ ಭಾಗವಹಿಸುವರು. ಅಂದು ಮಧ್ಯಾಹ್ನ 1ಕ್ಕೆ ಮಹಾ ಅನ್ನ

ಸಂತರ್ಪಣೆಯೂ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಹಾಗೂ ದೇವಸ್ಥಾನದ ಗುಡ್ಡಪ್ಪ ಎಂ.ಎಸ್.ರವಿಕುಮಾರ್, ಖಜಾಂಚಿ ಮಹದೇವ್, ಮಹಾಪೋಷಕರಾದ ವೆಂಕಟ ದಾಸಾಚಾರ್, ಚೆಲುವಯ್ಯ, ಎಸ್.ಜಗನ್ನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net