ಧಾರ್ಮಿಕ ಕಾರ್ಯದಿಂದ ಧರ್ಮ ಉಳಿಸಲು ಸಾಧ್ಯ

22bhr 1 temple
ಬಾಳೆಹೊನ್ನೂರಿನ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಾರಂಭಗೊಂಡ ನವರಾತ್ರಿ ಉತ್ಸವಕ್ಕೆ ಹೊರನಾಡಿನ ಗಿರಿಜಾಶಂಕರ ಜೋಷಿ ಚಾಲನೆ ನೀಡಿದರು. ನಾಗೇಶ್ ಹೆಗ್ಡೆ, ಬಿ.ಚನ್ನಕೇಶವ, ಭಾಸ್ಕರ್ ವೆನಿಲ್ಲಾ, ಆರ್.ಡಿ.ಮಹೇಂದ್ರ, ಪ್ರಭಾಕರ್, ಶಿವರಾಮಶೆಟ್ಟಿ ಇದ್ದರು.
Published on

ಬಾಳೆಹೊನ್ನೂರು: ಹಿಂದು ಧರ್ಮ ಶ್ರೇಷ್ಠತೆಯನ್ನು ಎತ್ತಿ ಹಿಡಿದ ಧರ್ಮ. ನಾವು ನಮ್ಮ ಧರ್ಮಪಾಲನೆ ಮಾಡುವುದರೊಂದಿಗೆ ಹಲವು ಧರ್ಮಗಳನ್ನೂ ಸಹ ಒಪ್ಪಿದ್ದೇವೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ಗಿರಿಜಾಶಂಕರ ಜೋಷಿ ಹೇಳಿದರು.

ಪಟ್ಟಣದ ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರದಿಂದ ಆಯೋಜಿಸಿರುವ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದೆ ಹಲವು ಬಾರಿ ನಮ್ಮ ಧರ್ಮದ ಮೇಲೆ ಆಕ್ರಮಣವಾಗಿದೆ. ಇಂದಿಗೂ ಕೂಡ ಅದು ಮುಂದುವರಿದಿದೆ. ಆದರೂ ನಮ್ಮ ಧರ್ಮಕ್ಕೆ ಯಾವುದೇ ತೊಂದರೆಯಾಗಿಲ್ಲ. ನಾವು ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಧರ್ಮವನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ. ಧಾರ್ಮಿಕ ಕಾರ್ಯಗಳ ಮೂಲಕ ಧರ್ಮವನ್ನು ಉಳಿಸಲು ಸಾಧ್ಯವಿದೆ ಎಂದರು.

ದೇವಾಲಯಗಳಲ್ಲಿ ಪೂಜಾ ಪುನಸ್ಕಾರಗಳ ಮೂಲಕ ದೇವರಿಗೆ ಶಕ್ತಿಯನ್ನು ತುಂಬಿ ಆತನಿಂದ ಬೇಡಿದ ವರಗಳನ್ನು ನಾವು ಪಡೆದುಕೊಳ್ಳುತ್ತೇವೆ. ದೇವರಲ್ಲಿ ನಾವು ಮನಸ್ಸು, ಆತ್ಮದಿಂದ ಪರಿಶುದ್ಧವಾಗಿ ಭಕ್ತಿಯನ್ನು ನಿಸ್ವಾರ್ಥವಾಗಿ ಸಮರ್ಪಣೆ ಮಾಡಿದರೆ ನಮಗೆ ಲಗಳು ನಿಶ್ಚಿತವಾಗಿ ಲಭಿಸಲಿದೆ ಎಂದು ಹೇಳಿದರು.

ಮಾರ್ಕಾಂಡೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ದುರ್ಗಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಎಚ್.ಡಿ.ಸತೀಶ್, ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಕೆ.ಟಿ.ವೆಂಕಟೇಶ್, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಉಪೇಂದ್ರ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಶ್ರೀಕಾಂತ್, ಬಿ.ಕೆ.ನಾಗರಾಜ್, ನಾರಾಯಣ ಶೆಟ್ಟಿ, ಕೆ.ಪ್ರಶಾಂತ್‌ಕುಮಾರ್, ಬಿ.ಗಿರೀಶ್, ಮಂಜು ಹೊಳೆಬಾಗಿಲು ಸೇರಿದಂತೆ ಸಮಿತಿ ಸದಸ್ಯರು, ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯಭಟ್ ನೇತೃತ್ವದಲ್ಲಿ ಪುರೋಹಿತರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net