ಧರ್ಮಾಪುರ ಗ್ರಾಪಂ ಅಧ್ಯಕ್ಷರಾಗಿ ದೇವೇಗೌಡ ಆಯ್ಕೆ

HUN-JAN-20-4(DHARMAPURA GP ELECTION)
Published on

ಹುಣಸೂರು: ಧರ್ಮಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಳ್ಳದಕೊಪ್ಪಲು ದೇವೇಗೌಡ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿದ್ದ ರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಹಳ್ಳದಕೊಪ್ಪಲು ದೇವೇಗೌಡ 12 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಭಾಗ್ಯಮ್ಮ ಕೇವಲ ಒಂದು ಮತ ಪಡೆದರು. 17 ಸದಸ್ಯರನ್ನು ಹೊಂದಿರುವ ಪಂಚಾಯಿತಿಯಲ್ಲಿ ಸದಸ್ಯರಾದ ಸ್ವಾಮಿಗೌಡ, ಸುಮಿತ್ರಾ, ಕರಿಗೌಡ ಹಾಗೂ ಪವಿತ್ರಾ ಮತ ಚಲಾಯಿಸದೆ ಹೊರನಡೆದರು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹಾರಂಬಿ ನೀರಾವರಿ ನಿಗಮದ ಎಇಇ ಮಂಜುನಾಥ್ ಪ್ರಸಾದ್ ದೇವೇಗೌಡ ಅವರ ಗೆಲುವನ್ನು ಅಧಿಕೃತವಾಗಿ ಘೊಷಿಸಿದರು.

ಜಿಪಂ ಸದಸ್ಯ ಎಂ.ಬಿ.ಸುರೇಂದ್ರ ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಪ್ರಭು, ಗ್ರಾಪಂ ಮಾಜಿ ಅಧ್ಯಕ್ಷರಾದ ಆರ್.ವಿಶ್ವನಾಥ್, ಚಲುವರಾಜ್, ಗೋವಿಂದೇಗೌಡ, ರಾಜು, ಸುಂದರ್‌ರಾಜ್, ಗ್ರಾಪಂ ಸದಸ್ಯರಾದ ಗವಿನಾಯಕ್, ಪಳಿನಿಯಮ್ಮ, ಜಯಶೀಲ ಕುಮಾರ್, ವೀಣಾ, ಕೆಂಪಮ್ಮ, ಗೋವಿಂದ, ಶಾರದಮ್ಮ, ಸಾಕಮ್ಮ, ಮಂಜುನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net