ಧರ್ಮಸ್ಥಳ ಯೋಜನೆಯಿಂದ ಗೇರು ಗಿಡ ವಿತರಣೆ

geru gida
ಎನ್.ಆರ್.ಪುರ ತಾಲೂಕು ಕೈಮರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಂಘದ ಸದಸ್ಯರಿಗೆ ಗೇರು ಗಿಡಗಳನ್ನು ವಿತರಿಸಲಾಯಿತು. ತೀರ್ಥರಾಜ್, ರಮಾ, ಭಾನುಮತಿ ಇತರರಿದ್ದರು.
Published on

ಎನ್.ಆರ್.ಪುರ: ರೈತರು ಅಡಕೆ ಜತೆಗೆ ಗೇರು ಗಿಡಗಳನ್ನು ಸಹ ನೆಟ್ಟರೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ದಿನೇಶ್ ತಿಳಿಸಿದರು.
ಅವರು ಮುತ್ತಿನಕೊಪ್ಪ, ಕೈಮರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿಜಯಲಕ್ಷ್ಮೀ ೌಂಡೇಷನ್‌ಯಿಂದ ಹೆಬ್ರಿ ನರ್ಸರಿಯಿಂದ 6 ಸಾವಿರ ಗೇರು ಗಿಡಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಕಸಿ ಕಟ್ಟಿದ ಉತ್ತಮ ಗೇರು ಗಿಡಗಳನ್ನು ನೆಟ್ಟರೆ ಹೆಚ್ಚು ಆದಾಯ ಪಡೆಯಬಹುದು ಎಂದರು.
ಅಡಕೆಯ ಜತೆಗೆ ಏಲಕ್ಕಿ, ಜಾಯಿಕಾಯಿ, ಸಪೋಟ ಇನ್ನಿತರ ಗಿಡಗಳನ್ನು ಬೆಳೆಯುವುದರಿಂದ ರೈತರು ಆರ್ಥಿಕಮಟ್ಟ ಸುಧಾರಿಸಿಕೊಳ್ಳಬಹುದು. ಗೇರು ಗಿಡಗಳನ್ನು 7 ಮೀಟರ್ ಅಂತರದಲ್ಲಿ ನಾಟಿ ಮಾಡಬೇಕಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ವಲಯದ ಮೇಲ್ವಿಚಾರಕ ತೀರ್ಥರಾಜ್, ಸೇವಾ ಪ್ರತಿನಿಧಿ ರಮಾ, ಭಾನುಮತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net