

ಹಿರೇಕೆರೂರ: ಧರ್ಮಸ್ಥಳ ಯೋಜನೆ ಗ್ರಾಮೀಣ ಜನರ ಬದುಕನ್ನು ಹಸನುಗೊಳಿಸಲು ಶ್ರಮಿಸುತ್ತಿದೆ ಎಂದು ಹಿರೇಕೆರೂರ, ರಟ್ಟಿಹಳ್ಳಿ ತಾಲೂಕು ಯೋಜನಾಧಿಕಾರಿ ಸತೀಶ ಗಾಂವಕರ ಹೇಳಿದರು.
ತಾಲೂಕಿನ ಹಳೇ ವೀರಾಪುರ ಗ್ರಾಮದ ಆಂಜನೇಯ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 1.50 ಲಕ್ಷ ರೂ, ಸಹಾಯಧನದ ಡಿಡಿ ಅನ್ನು ಶನಿವಾರ ದೇವಾಸ್ಥಾನ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ, ಶ್ರೀ ಕ್ಷೇತ್ರದಿಂದ ಪೂಜ್ಯರು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಜನತೆ ಸುಖ ಜೀವನ ಕಟ್ಟಿಕೊಳ್ಳಲು ನೆರವಾಗುತ್ತಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಗೀತಾ ಗೋಡಪಟ್ಟಿ, ಒಕ್ಕೂಟದ ಅಧ್ಯಕ್ಷೆ ಕೌಶಲ್ಯ ಪುರದಾಳ, ಮುಖಂಡರಾದ ಚಂದ್ರಪ್ಪ ದೀವಿಗಿಹಳ್ಳಿ, ಸಂತೋಷ ಗೋಡಪಟ್ಟಿ, ಮಲ್ಲೇಶ ತಳವಾರ, ಮಲ್ಲೇಶಯ್ಯ ಹಿರೇಮಠ, ಅಶೋಕ, ಪಿರೂಸಾಬ, ದೇವಸ್ಥಾನ ಸಮಿತಿಯ ಅಧ್ಯಕ್ಷ ಶಂಕರಗೌಡ, ಕಾರ್ಯದರ್ಶಿ ಮಂಜಪ್ಪ ಗೋಡಪಟ್ಟಿ, ಕಾರ್ತಿಕ, ಸುಧಾ ರಟ್ಟಿಹಳ್ಳಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಇದ್ದರು.
ವಲಯದ ಮೇಲ್ವಿಚಾರಕ ಚಂದ್ರಪ್ಪ ಅಕ್ಕಿವಳ್ಳಿ, ನೋಡಲ್ ಅಧಿಕಾರಿ ಸಾಗರ, ಸೇವಾಪ್ರತಿನಿಧಿ ಕೃಷ್ಣವ್ವ ನಿರ್ವಹಿಸಿದರು.