

ಕೋಲಾರ: ನಗರದಲ್ಲಿ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಯತ್ನಿಸಿದೆಯಾದರೂ ನಗರಸಭೆಯೊಂದಿಗೆ ಸಮನ್ವಯತೆ ಸಾಧಿಸುವಲ್ಲಿ ವಿಫಲವಾಗಿರುವುದರಿಂದ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಏಕಮುಖ ಸಂಚಾರ ವಾರ್ಗಕ್ಕೆ ಪರ್ಯಾಯವಾಗಿ ಯೋಗ್ಯವಲ್ಲದ ವಾರ್ಗ ತೋರಿಸಲಾಗುತ್ತಿದೆ.ಪಟ್‌ಪಾತ್, ಕಾಲುವೆ, ರಸ್ತೆ ಒತ್ತುವರಿ ತೆರವುಗೊಳಿಸಿಲ್ಲ. ಮನಸೋ ಇಚ್ಛೆ ಪಾರ್ಕಿಂಗ್, ಹೊತ್ತು ಗೊತ್ತಿಲ್ಲದೆ ರಸ್ತೆ ನಡುವೆ ಸರಕು ಇಳಿಸುವುದು, ರಸ್ತೆ ಮೇಲೆ ಕಸ ಸುರಿಯುವುದು ನಡೆಯುತ್ತಿದೆ. ಇದಕ್ಕೆಲ್ಲ ನಗರಸಭೆ ವಿರಾಮ ಹಾಕಿಲ್ಲ, ಆದರೆ ಪೊಲೀಸರು ಸಂಚಾರ ನಿಯಮ ಪಾಲಿಸಿ ಎನ್ನುತ್ತಿರುವುದು ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ಯುದ್ಧಕ್ಕೂ ಕಾರಣವಾಗುತ್ತಿದೆ.
ಪೊಲೀಸ್ ಇಲಾಖೆಯೊಂದಿಗೆ ನಗರಸಭೆ ಸಿಬ್ಬಂದಿ ಮಂಗಳವಾರ ವಾತ್ರ ಒತ್ತುವರಿ ತೆರವಿಗೆ ಇಳಿಯುತ್ತಾರೆ. ಕಾರ್ಯಾಚರಣೆ ಮುಗಿಯುತ್ತಿದ್ದಂತೆ ವ್ಯಾಪಾರಸ್ಥರು, ವಾಹನ ವಾಲೀಕರು ಮತ್ತೆ ಅದೇ ಸ್ಥಳದಲ್ಲಿ ಕೆಲಸ ಮುಂದುವರಿಸುತ್ತಾರೆ. ಸದಸ್ಯರು ವಾರ್ಡ್ ತೋರಿಸಿ ಅನುದಾನ ಪಡೆಯುವುದಕ್ಕಿಂತ ನಗರದ ಮಧ್ಯಭಾಗ ಸಂಚಾರಕ್ಕೆ ಯೋಗ್ಯವಾಗಿಲ್ಲದ ರಸ್ತೆಗಳ ಅಭಿವೃದ್ಧಿಗೆ ಸಹಕರಿಸಿದರೆ ಅದಕ್ಕಿಂತ ದೊಡ್ಡ ಕೆಲಸ ಮತ್ತೊಂದಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯವಾಗಿದೆ.
ಪ್ರಸ್ತುತ ಎಂಜಿ ರಸ್ತೆ, ದೊಡ್ಡಪೇಟೆ ರಸ್ತೆ, ಕಾಳಮ್ಮಗುಡಿ ವಾರ್ಗ, ಶಾರದಾ ಟಾಕೀಸ್ ರಸ್ತೆಗಳನ್ನು ಏಕಮುಖ ಸಂಚಾರ ವಾಡಲಾಗಿದೆ. ಆದರೆ ಎಂಜಿ ರಸ್ತೆಗೆ ಪರ್ಯಾಯವಾಗಿ ಗೌರಿಪೇಟೆ ಮುಖ್ಯರಸ್ತೆ ಇದ್ದು, ಅಲ್ಲಿ ಮೋರಿ ದುರಸ್ತಿ ನಡೆಯುತ್ತಿದೆ. ಗಾಂಧಿವನದಿಂದ ಶಾಂತಿ ಸ್ಟೋರ್ ವಾರ್ಗದಲ್ಲಿ ಸಂಚರಿಸಿದರೆ ದೊಡ್ಡಪೇಟೆ ರಸ್ತೆ ಸೇರಬಹುದು. ಅಲ್ಲಿಂದ ಮುಂದೆ ಅಮ್ಮವಾರಿಪೇಟೆ ತಲುಪಲು ಗಲ್ಲಿಯಲ್ಲೇ ಪ್ರಯಾಸಪಟ್ಟು ತಲುಪಬೇಕು. ದೊಡ್ಡಪೇಟೆ ರಸ್ತೆಗೆ ಬದಲಾಗಿ ವೆಂಕಟರಮಣಸ್ವಾಮಿ ದೇಗುಲ ರಸ್ತೆ ತೋರಿಸಲಾಗುತ್ತಿದ್ದು, ಅದರಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಕಾಳಮ್ಮ ಗುಡಿ, ದೊಡ್ಡಪೇಟೆ ರಸ್ತೆಗಳ ನಡುವಿನ ಬ್ರಾಹ್ಮಣರ ಬೀದಿಯಲ್ಲಿ ಅಂಗಡಿ ಮಳಿಗೆಗಳವರು ರಸ್ತೆ ಮೇಲೆ ವ್ಯಾಪಾರ ವಾಡುತ್ತಿದ್ದು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ.
ಹೆದ್ದಾರಿ ಮೇಲೂ ಪಾರ್ಕಿಂಗ್: ಬಂಗಾರಪೇಟೆ ಕಡೆ ಸಾಗುವ ಹೆದ್ದಾರಿ ವಿಸ್ತರಣೆಯಾಗಿದ್ದು, ಗಲ್‌ಪೇಟೆ ಶನಿಮಹಾತ್ಮ ದೇಗುಲ ವೃತ್ತದಿಂದ ಬಂಗಾರಪೇಟೆ ಸರ್ಕಲ್‌ವರೆಗೆ ದ್ವಿಚಕ್ರ ವಾಹನ, ಟೆಂಪೋ, ಟೂರಿಸ್ಟ್ ವಾಹನಗಳ ಪಾರ್ಕಿಂಗ್ ವಾಡುತ್ತಾರೆ. ರಂಗಮಂದಿರ ಆಸುಪಾಸು ಹಣ್ಣಿನ ವ್ಯಾಪಾರ, ಅನಧಿಕೃತ ಪಾರ್ಕಿಂಗ್ ಮಾಡುತ್ತಾರೆ. ಇನ್ನು ಬೆಂಗಳೂರು-ಚೆನ್ನೈ ಹೆದ್ದಾರಿ ಸಂಪರ್ಕಿಸುವ ಎಂಬಿ ರಸ್ತೆಯಲ್ಲೂ ುಟ್‌ಪಾತ್ ಅತಿಕ್ರಮಣ ನಡೆದಿದೆ.
ರಸ್ತೆ ಮೇಲೆ ಓಡಾಟ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಗರದ ಒಳ ಪ್ರವೇಶಿಸುವ ಬ್ರಾಹ್ಮಣರ ಬೀದಿಯಲ್ಲಿ ಒತ್ತುವರಿ ಕಾರಣ ಓಡಾಟ ದುಸ್ತರವಾಗಿದೆ. ದೊಡ್ಡಪೇಟೆ ರಸ್ತೆಯಲ್ಲಿ ಹೊತ್ತು ಗೊತ್ತಿಲ್ಲದೆ ಲಾರಿಗಳಿಂದ ಸರಕು ಇಳಿಸುವುದು ಸಾವಾನ್ಯವಾಗಿದೆ. ಎಂಜಿ ರಸ್ತೆಯಲ್ಲಿ ಪಾದಚಾರಿ ವಾರ್ಗ ಮುಕ್ತವಾಗಿಲ್ಲ.
ನಗರದಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣ ಹೊರತುಪಡಿಸಿದರೆ ಎಲ್ಲೂ ಬಸ್ ನಿಲ್ದಾಣಗಳಿಲ್ಲ. ನಗರಸಭೆ, ಕೂಡಾ ಈ ನಿಟ್ಟಿನಲ್ಲಿ ಪ್ರಯತ್ನಿಸದೇ ಇರುವುದರಿಂದ ಪ್ರಯಾಣಿಕರು ಮಳೆ, ಗಾಳಿ, ಬಿಸಿಲೆನ್ನದೆ ರಸ್ತೆ ಮೇಲೆ ನಿಂತು ಬಸ್‌ಗೆ ಕಾಯುವ ದುಸ್ಥಿತಿ ಇದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಪೊಲೀಸ್ ಇಲಾಖೆ ಸುಗಮ ಸಂಚಾರ ನಿಯಮ ಅನುಷ್ಠಾನಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇದಕ್ಕೆ ಪೂರಕವಾಗಿ ನಗರಸಭೆ, ಪಿಡಬ್ಲ್ಯುಡಿ, ಕೆಎಸ್‌ಆರ್‌ಟಿಸಿ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ರಸ್ತೆಗಳನ್ನು ಸರಿಪಡಿಸಿ, ಒತ್ತುವರಿ ತಡೆದು ಕಟ್ಟುನಿಟ್ಟಿನಲ್ಲಿ ನಿಯಮ ಜಾರಿಗೊಳಿಸಿದರೆ ನಗರದ ಕಲ್ಪನೆ ಸಾಕಾರಗೊಳ್ಳಬಹುದು.
ಎಂಜಿ ರಸ್ತೆ ಏಕಮುಖ ಸಂಚಾರವಾಗಿರುವುದರಿಂದ ಪರ್ಯಾಯ ವಾರ್ಗ ಸೂಚಿಸುತ್ತೇವೆ. ಜನರಲ್ಲಿ ಅರಿವು ಮೂಡಿಸಲು ಪೊಲೀಸ್ ಇಲಾಖೆ ಕೆಲ ಕ್ರಮ ಕೈಗೊಂಡಿದೆ. ಎಲ್ಲರ ಸಹಕಾರ ಪಡೆದು ಜನ, ವಾಹನ ಸವಾರರು ಮತ್ತು ಎಲ್ಲ ವಾಹನಗಳ ಮುಕ್ತ ಸಂಚಾರಕ್ಕೆ ಅಗತ್ಯ ಕ್ರಮ ಜಾರಿವಾಡಲಾಗುವುದು. ಡಿ.ದೇವರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೋಲಾರ ನಗರದಲ್ಲಿ ರಸ್ತೆ ಹಳ್ಳ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ವಾಡಿಕೊಡಲು ಕ್ರಮ ಕೈಗೊಳ್ಳಲಾಗಿದೆ. ಸಿಟಿ ರೌಂಡ್ಸ್ ಮೂಲಕ ಸಮಸ್ಯೆ ಸರಿಪಡಿಸಲು ಯತ್ನಿಸುತ್ತೇವೆ. ರಸ್ತೆಗಳನ್ನು ಸಂಚಾರಯೋಗ್ಯವನ್ನಾಗಿಸಲು ಯತ್ನಿಸಲಾಗುವುದು. ಪ್ರಸಾದ್, ನಗರಸಭೆ ಆಯುಕ್ತ, ಕೋಲಾರ ಏಕಮುಖ ಸಂಚಾರ ರಸ್ತೆಗಳಿಗೆ ಪರ್ಯಾಯ ವಾರ್ಗ ಅಭಿವೃದ್ಧಿಪಡಿಸಿಲ್ಲ. ಪೊಲೀಸರು ಸೂಚಿಸುವ ವಾರ್ಗಗಳಲ್ಲಿ ಹೋದರೆ ಪ್ರಯಾಣ ಅವಧಿ ದುಪ್ಪಟ್ಟಾಗುತ್ತದೆ. ಮಂಜುನಾಥ್, ಚೌಡೇಶ್ವರಿ ನಗರ