ಧರ್ಮದಲ್ಲಿ ರಾಜಕೀಯ ಬೆರಸುವ ಕೆಲಸ ಸರಿಯಲ್ಲ

20210203_132628 copy
Published on


ಯಾದಗಿರಿ: ಪ್ರಾಚೀನ ಕಾಲದಿಂದಲೂ ವೀರಶೈವ ಧರ್ಮ ತನ್ನದೇಯಾದ ಸಿದ್ಧಾಂತ ಹೊಂದುವ ಮೂಲಕ ಸಮಾಜದಲ್ಲಿ ಸನಾತನ ಸಂಸ್ಕಾರ ಉಳಿಸಿ, ಬೆಳಸುವ ಕೈಂಕರ್ಯ ಮಾಡುತ್ತಿದ್ದು, ಇಂಥ ಪವಿತ್ರವಾದ ಧರ್ಮದಲ್ಲಿ ರಾಜಕೀಯ ಬೆರಸುವ ಕೆಲಸವಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು ಕಳವಳ ವ್ಯಕ್ತಪಡಿಸಿದರು.

ಬುಧವಾರ ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದಲ್ಲಿ ವಾರಣಾಸಿ ಹಿರೇಮಠದ ಹಿರಿಯ ಯತಿಗಳಾದ ಶ್ರೀ ಗಂಗಾಧರ ಶಿವಾಚಾರ್ಯರ 92ನೇ ಜನ್ಮದಿನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧಾಮರ್ಿಕ ಸಭೆ ಹಾಗೂ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿ ಆಶಿರ್ವಚನ ನೀಡಿ, ವೀರಶೈವ ಧರ್ಮದಲ್ಲಿ ನೂರಾರು ಒಳಪಂಗಡಗಳಿದ್ದರೂ ಎಲ್ಲ ಪಂಗಡಗಳ ಸಿದ್ಧಾಂತ ಒಂದೇ ಆಗಿದೆ. ಹೀಗಾಗಿ ಕವಲು ದಾರಿಯಲ್ಲಿ ನಡೆಯುವ ಕೆಲಸವಾಗಬಾರದು ಎಂದು ಸೂಚ್ಯವಾಗಿ ನುಡಿದರು.

ಯಾವ ವ್ಯಕ್ತಿ ಧರ್ಮ ಪರಿಪಾಲನೆ ಮಾಡುವುದುಲ್ಲವೊ ಆತ ಪಶುವಿಗಿಂತಲೂ ಕಡೆ. ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತಗೊಂಡ ವೀರಶೈವ ಧರ್ಮ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಾಲದಲ್ಲೂ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದೆ ಎಂದು ಹೇಳಿದರು.

ಹೆಡಗಿಮದ್ರಾ ಗ್ರಾಮದ ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಭಕ್ತಿ ಹೆಚ್ಚಾದಲ್ಲಿ ಭಗವಂತನೂ ಸಣ್ಣವನಾಗುತ್ತಾನೆ ಎಂಬುದಕ್ಕೆ ಯಲ್ಹೇರಿ ಗ್ರಾಮದಲ್ಲಿ ನಡೆದ ಈ ಧಾಮರ್ಿಕ ಕಾರ್ಯಕ್ರಮ ಸಾಕ್ಷಿಯಾಗಿದೆ. ಸಂತರು ದೇಶದೊಳಗೆ ಧರ್ಮ ಕಾಪಾಡಿದರೆ, ಸೈನಿಕರು ಗಡಿಯಲ್ಲಿ ದೇಶವನ್ನು ಕಾಪಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ, ಶ್ರೀಗಂಗಾಧರ ಸ್ವಾಮಿಗಳ ಜನ್ಮದಿನ ಕಾರ್ಯಕ್ರಮದ ಸರ್ವಸೇವೆ ನಮ್ಮ ಮನೆತನದಿಂದ ನಡೆಯಲು ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಪುಣ್ಯ. ಗಡಿ ಭಾಗದ ಗುರುಮಠಕಲ್ ಕ್ಷೇತ್ರಕ್ಕಿಂದು ಜಗದ್ಗುರುಗಳು ಆಗಮಿಸಿ ಕ್ಷೇತ್ರದ ಜನತೆಗೆ ಆಶಿರ್ವಾದ ಮಾಡಿದ್ದು ಎಲ್ಲಿಲ್ಲದ ಸಂತಸ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net