ಧರ್ಮ ವಿಸ್ತಾರವಾದಿಗಳು ಯಾರನ್ನೂ ಉಳಿಸಲ್ಲ

HIREMATH MALLIKARJUN SRI
Published on

ನರೇಗಲ್ಲ: ನಮ್ಮ ದೇಶದಲ್ಲಿ 600 ವರ್ಷ ಕಾಲ ಇಸ್ಲಾಂ ಧರ್ಮದವರು ಆಳ್ವಿಕೆ ನಡೆಸಿದ್ದಾರೆ. ದರ್ಗಾ ಎನ್ನುವುದು ಸೂಫಿ ಸಂತರ ಪರಂಪರೆಗೆ ಒಳಪಡುತ್ತದೆ. ಅವರು ಶಾಂತಿ, ಸಮಾನತೆ, ಸಹಬಾಳ್ವೆಯ ಸಂದೇಶ ಸಾರಿದರು. ಆದರೆ, ಮೂಲ ಸಂಪ್ರದಾಯವಾದಿ ಇಸ್ಲಾಂ ಧರ್ಮೀಯರು ಬಹಳ ಅಪಾಯಕಾರಿ ಎಂದು ಇಲ್ಲಿಯ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಆಸ್ತಿ ದಾಖಲೆಗಳಲ್ಲಿ ವಕ್ಪ್ ಹೆಸರು ನಮೂದು ವಿರೋಧಿಸಿ ರೋಣ ತಾಲೂಕು ನರೇಗಲ್ಲ ಪಟ್ಟಣದಲ್ಲಿ ಭಾನುವಾರ ಬಂದ್ ಕರೆ ವೇಳೆ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ದೇಶದ 12ನೇ ಶತಮಾನದ ಶರಣರಂತೆ ಸೂಫಿ ಸಂತರು ಉತ್ತಮ ಮೌಲ್ಯಗಳನ್ನು ಸಾರಿ, ಧರ್ಮದ ಲೋಪಗಳನ್ನು ಎತ್ತಿ ತೋರಿಸಿದಾಗ ಆಗಿನ ಸಂಪ್ರದಾಯವಾದಿ ಧರ್ಮೀಯರು ಮತ್ತು ರಾಜರು ಸೂಫಿ ಸಂತರನ್ನು ವಿರೋಧಿಸಿ ಹೊರಹಾಕಿದರು. ಹಾಗಾಗಿ ಅವರು ಅರಬ್ ರಾಷ್ಟ್ರಗಳಿಂದ ಸಂಚರಿಸುತ್ತ ಭಾರತಕ್ಕೆ ಬಂದರು. ಒಳ್ಳೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದರು. ಆದರೆ, ಮೂಲ ಸಂಪ್ರದಾಯವಾದಿ ಇಸ್ಲಾಂ ಧರ್ಮೀಯರು ಅಪಾಯಕಾರಿ ಎಂದರು.

ಯಾವ ಧರ್ಮದಲ್ಲಿ ವಿಸ್ತಾರವಾದಿತನ ಇರುತ್ತದೆಯೋ ಅವರು ಯಾರನ್ನೂ ಉಳಿಸುವುದಿಲ್ಲ. ಅವರು ನಾಶವಾಗಲಿ, ಇವರು ನಾಶವಾಗಲಿ ಎನ್ನುವ ಭಾವನೆ ವಿಸ್ತಾರವಾದಿಗಳಲ್ಲಿ ಇರುತ್ತದೆ. ಧರ್ಮದಲ್ಲಿರುವ ಮೌಲ್ಯಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ನಿಜವಾದ ಮಾನವರಾಗುತ್ತೇವೆ ಎಂದು ಶ್ರೀಗಳು ಮಾರ್ವಿುಕವಾಗಿ ಹೇಳಿದರು.

ರಹಿಮಾನ ಶಾವಲಿ ದರ್ಗಾದ ಸಯ್ಯದ್ ಮಂಜೂರ ಹುಸೇನ್ ಶ್ಯಾವಲಿ ಶರಣರು ಮಾತನಾಡಿ, ಯಾವುದೇ ರೈತನಿಗೂ ಯಾವ ರೀತಿಯಲ್ಲೂ ಅನ್ಯಾಯವಾಗಬಾರದು ಎಂದರು.

ಬಂದ್ ಯಶಸ್ವಿ: ವಕ್ಪ್ ನಮೂದು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಕರೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net