ದೊಡ್ಡಹಳ್ಳಕ್ಕೆ ಬಿದ್ದು ಹೆಣ್ಣಾನೆ ಸಾವು

Published on

ಹನೂರು: ಮಲೆ ಮಹದೇಶ್ವರ ವನ್ಯಜೀವಿ ವಲಯದ ಚಂಗಡಿ ಅರಣ್ಯ ಪ್ರದೇಶದಲ್ಲಿರುವ ದೊಡ್ಡಹಳ್ಳದಲ್ಲಿ ಹೆಣ್ಣಾನೆಯೊಂದು ಮೃತಪಟ್ಟಿದೆ.

ಮಂಗಳವಾರ ಸಂಜೆ ದೊಡ್ಡಹಳ್ಳದ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ನಡೆಸಿತ್ತಿದ್ದ ವೇಳೆ ಆನೆಯ ಮೃತದೇಹ ಪತ್ತೆಯಾಗಿದೆ. ಸುಮಾರು 29 ವರ್ಷದ ಹೆಣ್ಣಾನೆ ನೀರು ಕುಡಿಯಲು ದೊಡ್ಡಹಳ್ಳದ ಬಳಿಗೆ ಆಗಮಸಿದೆ. ಆಳವಾದ ಹಳ್ಳಕ್ಕೆ ಆಯತಪ್ಪಿ ಬಿದ್ದಿದೆ. ಕಾಲು ಮತ್ತು ಇತರೆ ಭಾಗಗಳು ಮುರಿದು ಹೋಗಿ ಸಾವನ್ನಪ್ಪಿದೆ‌. ಮರಣೋತ್ತರ ಪರೀಕ್ಷೆಯ ನಂತರದ ಸಂಪೂರ್ಣ ವರದಿಯನ್ನು ತಿಳಿಸಲಾಗುವುದು ಎಂದು ಮ.ಮ ಬೆಟ್ಟ ವನ್ಯಜೀವಿ ವಲಯದ ಡಿಸಿಎಫ್ ಏಡುಕೊಂಡಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net