

ಬೈಲಕುಪ್ಪೆ: ಇಲ್ಲಿನ ದೊಡ್ಡಮ್ಮತಾಯಿ ದೇವಸ್ಥಾನದ ಮೂಲಸ್ಥಾನದಲ್ಲಿ ಶುಕ್ರವಾರ ವಾರ್ಷಿಕೋತ್ಸವ ವಿಶೇಷ ಪೂಜೆ ನಡೆಯಿತು.
ಗ್ರಾಮದ ಒಂದನೇ ಕ್ಯಾಂಪ್ ರೋಡ್ ಪಕ್ಕದಲ್ಲಿರುವ ದೇವಸ್ಥಾನದ ಆವರಣದಲ್ಲಿ ಗರ್ಭಗುಡಿ ನಿರ್ಮಾಣ ಹಂತದಲ್ಲಿರುವ ಹಿನ್ನೆಲೆಯಲ್ಲಿ ಅರ್ಚಕ ವಿಠಲ ಅವರು ವಿವಿಧ ಪೂಜಾ ಕೈಂಕರ್ಯ ಮತ್ತು ಹೋಮ ನೆರವೇರಿಸಿದರು. ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಗ್ರಾಮಸ್ಥರಾದ ಸ್ವಾಮಿ, ಜವರೇಗೌಡ, ಶಿವ, ಸುರೇಶ್, ಕೃಷ್ಣ, ವಿನು, ಪುಟ್ಟಣ್ಣ, ಕಿರಣ್, ರಾಮು ಇತರರು ಹಾಜರಿದ್ದರು.