

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಅಧ್ಯಕ್ಷೆಯಾಗಿ ಬಿ.ಎಲ್.ಅನಿತಾ ಹಾಗೂ ಉಪಾಧ್ಯಕ್ಷೆಯಾಗಿ ಸಾವಿತ್ರಮ್ಮ ಚುನಾಯಿತರಾದರು.
ಗುರುವಾರ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಅನಿತಾ 12 ಮತ ಪಡೆದರೆ ಪ್ರತಿಸ್ಪರ್ಧಿ ಅಂಬಿಕಾ 9 ಮತ ಪಡೆದರು. ಅಂತೆಯೆ ಸಾವಿತ್ರಮ್ಮ 11 ಮತ ಪಡೆದರೆ, ಎಂ.ಟಿ.ಕುಮಾರ್ 10 ಮತ ಪಡೆದರು. ಚುನಾವಣಾಧಿಕಾರಿಯಾಗಿ ಬಸವರಾಜು ಕಾರ್ಯ ನಿರ್ವಹಿಸಿದರು.
ಗ್ರಾಪಂ ಸದಸ್ಯರಾದ ಇಂದ್ರೇಶ್, ದಿನೇಶ್, ಜಾನಕಮ್ಮ, ಕುಮಾರ್, ಮಾಯಾವತಿ, ಸುರೇಶ್, ಅಬ್ಬಾಸ್, ಆಸಿಯಾಖಾನಂ, ಸೈಯದ್ ಜವೇರಿಯಾ, ಸ್ವಾಮಿಗೌಡ, ಗಾಯತ್ರಿ, ಸವೀನ್‌ಕುಮಾರ್, ಶಶಿಕಲಾ, ನಾಗರಾಜು, ಲತಾ, ಶಿಲ್ಪಾ, ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಲೋಕೇಶ್, ವಕೀಲ ಭಾಸ್ಕರ್ ಮತ್ತಿತರರು ಹಾಜರಿದ್ದರು.