ದೊಡ್ಡ ಕ್ರಾಂತಿ ಮಾಡಿದ ವಚನ ಸಾಹಿತ್ಯ

3HDK2
Published on

ಎಚ್.ಡಿ.ಕೋಟೆ: ವಚನ ಸಾಹಿತ್ಯ ಸಂಪ್ರದಾಯಕ್ಕಿಂತ ಅನುಭವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿಯನ್ನೆ ಉಂಟು ಮಾಡಿತು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಹ್ಯಾಂಡ್‌ಪೋಸ್ಟ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಶಾಲೆಗಳೆಡೆಗೆ ವಚನಗಳ ನಡಿಗೆ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುಸಂಸ್ಕೃತ ಸಮಾಜ ರಚನೆಯಾಗಬೇಕಾದರೆ ವಚನಕಾರರ ನಡೆ, ನುಡಿ ಆದರ್ಶಗಳನ್ನು ಮೈಗೂಡಿಸಿಕೊಂಡು ಸರ್ವೇಜನೋ ಸುಖಿನೋ ಭವಂತು ಎಂಬ ನುಡಿಗೆ ಅನ್ವರ್ಥವಾಗಿ ಬದುಕಬೇಕು. ಇದರಿಂದ ಭಾರತೀಯ ಜೀವನಮೌಲ್ಯಗಳನ್ನು ಉಳಿಸಿದಂತಾಗುತ್ತದೆ ಎಂದರು.

ಪುರಸಭೆ ಸದಸ್ಯ ಪ್ರೇಂಸಾಗರ್ ಮಾತನಾಡಿ, ಬಸವಣ್ಣ ಪ್ರತಿಪಾದಿಸಿದ ಬಹು ದೊಡ್ಡ ಆರ್ಥಿಕ ಸೂತ್ರವೆಂದರೆ ಕಾಯಕತತ್ವ. ಪ್ರತಿಯೊಬ್ಬ ಶರಣನಿಗೂ ಕಾಯಕ ಅನಿವಾರ್ಯ. ಕಾಯಕವಿಲ್ಲದೆ ಗುರು ಲಿಂಗ, ಜಂಗಮರಿಗೂ ಮುಕ್ತಿಯಿಲ್ಲ ಎಂಬ ಕಾಯಕವೇ ಕೈಲಾಸ ಎಂಬ ಸಿದ್ಧಾಂತದ ಪ್ರತಿಪಾದನೆಗೆ ಬಸವಣ್ಣ ನಿಜವಾದ ಸ್ಫೂರ್ತಿಯಾಗಿದ್ದರು ಎಂದರು.


22 ವಿದ್ಯಾರ್ಥಿಗಳಿಗೆ ಉಚಿತ ಬಿಳಿ ಸಮವಸ್ತ್ರ ಹಾಗೂ ವಚನ ವಾಚನ ಮಾಡಿದ 20 ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸನಾಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು.
ಹೆಗ್ಗಡದೇವನಕೋಟೆ ತಾಲೂಕು ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಕೆ.ಎಂ. ಮಹೇಶ್, ದತ್ತಿ ಸದಸ್ಯರಾದ ಕೆ.ಎಸ್.ವೀರಭದ್ರಸ್ವಾಮಿ, ನಾರಾಯಣಲಾಲ್, ಮುಖ್ಯಶಿಕ್ಷಕ ನಾಗಸುಂದರ್, ಸಿ.ಆರ್.ಪಿ ಪ್ರತಿಭಾರಾಣಿ, ಶಿಕ್ಷಕಿ ನೂರ್ ಇಮ್ರಾನಾ, ಎಸ್‌ಡಿಎಂಸಿ ಸದಸ್ಯ ಶಿವನಂಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net