ದೈಹಿಕ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ಡಿಡಿಪಿಐಗೆ ಮನವಿ/ಜುಲೈ೩೧ರ ಗಡುವು/ತಪ್ಪಿದಲ್ಲಿ ಇಲಾಖೆ ಕ್ರೀಡಾಕೂಟಗಳಿಗೆ ಬಹಿಷ್ಕಾರದ ಎಚ್ಚರಿಕೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸಿ ಮುಖ್ಯಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡುವುದು ಸೇರಿದಂತೆ ಬಹುಕಾಲದ ವಿವಿಧ ಬೇಡಿಕೆಗಳನ್ನು ಜುಲೈ ಅಂತ್ಯದೊಳಗೆ ಈಡೇರಿಸದಿದ್ದರೆ ಪ್ರಸ್ತುತ ವರ್ಷದಿಂದ ಶಾಲಾ ಶಿಕ್ಷಣ ಇಲಾಖೆ ನಡೆಸುವ ಎಲ್ಲಾ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಶಾಖೆ ಪದಾಧಿಕಾರಿಗಳು ಡಿಡಿಪಿಐ ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಜಿಲ್ಲಾದೈಹಿಕ ಶಿಕ್ಷಣ ಶಿಕ್ಷಕರ ಸಂಘದಿAದ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು,ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸಿ, ಮುಖ್ಯಶಿಕ್ಷಕರಾಗಿ ಮುಂಬಡ್ತಿ ಸೇರಿದಂತೆ ಸಹಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡಲು ಆದೇಶ ಹೊರಡಿಸಲು ದೈಹಿಕ ಶಿಕ್ಷಕದರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ ಆಗ್ರಹಿಸಿದರು.

ಪ್ರೊ.ವೈದ್ಯನಾಥನ್ ವರದಿಯನ್ನು ಸರ್ಕಾರ ಸಂಪೂರ್ಣವಾಗಿ ಒಪ್ಪಿಕೊಂಡು ಸಂಪುಟ ಅನುಮೋದನೆ ಪಡೆದು ರಾಜ್ಯಪತ್ರದಲ್ಲೂ ಪ್ರಕಟಿಸಿದೆ, ಸದರಿ ವರದಿಯಲ್ಲಿನ ೧೨ ಅಂಶಗಳನ್ನು ಮಾತ್ರ ಜಾರಿ ಮಾಡಿದ್ದು, ೧೩ನೇ ಅಂಶವಾದ ದೈಹಿಕ ಶಿಕ್ಷಕರ ಮುಂಬಡ್ತಿ, ಸಹಶಿಕ್ಷಕರಿಗೆ ನೀಡುವ ಸೌಲಭ್ಯಗಳನ್ನು ಇಂದಿಗೂ ಜಾರಿಗೆ ತಂದಿಲ್ಲ ಎಂದು ತಿಳಿಸಿದರು.

ದೇಶದ ಪಂಜಾಬ್, ಉತ್ತರಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡಿದ್ದಾರೆ. ಕಳೆದ ೨೦೧೪ರಲ್ಲೇ ನಮ್ಮ ರಾಜ್ಯದಲ್ಲಿಯೂ ಪದವಿ ಪೂರ್ವ ಕಾಲೇಜಿನ ಸಹದೈಹಿಕ ಶಿಕ್ಷಕರ ಹುದ್ದೆಯನ್ನು ದೈಹಿಕ ಶಿಕ್ಷಣ ಉಪನ್ಯಾಸಕರ ಹುದ್ದೆಯಾಗಿ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು. ಅಲ್ಲಿಯವರೆಗೂ ಅತಿಥಿಶಿಕ್ಷಕರ ನೇಮಕಕ್ಕೆ ಆದೇಶ ನೀಡಬೇಕು ಎಂದು ಮನವಿ ಮಾಡಿದರು.

ದೈಹಿಕ ಶಿಕ್ಷಣ ವಿಷಯವನ್ನು ೬ನೇ ತರಗತಿಯಿಂದ ೧೦ನೇ ತರಗತಿವರೆಗೂ ಕಡ್ಡಾಯವಿಷಯವಾಗಿಸಿ ಪಠ್ಯಪುಸ್ತಕ ಮುದ್ರಣ ಮಾಡಿ ನೀಡಲಾಗಿದೆ. ಕಾಲಕಾಲಕ್ಕೆ ಶಿಕ್ಷಕರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ದೈಹಿಕ ಶಿಕ್ಷಣಕ್ಕೂ ಪರೀಕ್ಷೆಯಿದ್ದು ಉತ್ತೀರ್ಣ ಕಡ್ಡಾಯಗೊಳಿಸಿದ್ದರೂ ಅನೇಕ ಕಡೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಇದರಿಂದ ಮಕ್ಕಳು ದೈಹಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖ್ಯಶಿಕ್ಷಕರು, ಉಪಪ್ರಾಂಶುಪಾಲರ ಹುದ್ದೆಗಳು ಖಾಲಿ ಇದ್ದರೆ ದೈಹಿಕ ಶಿಕ್ಷಕರನ್ನೂ ಜೇಷ್ಟತೆ ಆಧಾರದಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಿಗೆ ಬಿಇಒ ಕಚೇರಿಗಳಲ್ಲಿ ದೈಹಿಕ ಶಿಕ್ಷಣ ಸಂಯೋಜಕರು, ಸಹಾಯಕ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ ಸೃಜಿಸಿ ಮುಂಬಡ್ತಿ ನೀಡಬೇಕು, ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ರದ್ದುಗೊಳಿಸಬೇಕು, ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಕರ ಹುದ್ದೆ ಸೃಜಿಸಬೇಕು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಅಬ್ದುಲ್ ಮನ್ನಾನ್, ಪ್ರಧಾನ ಕಾರ್ಯದರ್ಶಿ ವಿ.ವೆಂಕಟೇಶಪ್ಪ, ಖಜಾಂಚಿ ಆರ್.ನಾಗರಾಜ್, ರಾಜ್ಯಜಂಟಿ ಕಾರ್ಯದರ್ಶಿ ಕೆ.ಲೀಲಾ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಂಬಿಕಾ, ಜಿಲ್ಲೆಯ ಪದಾಧಿಕಾರಿಗಳಾದ ಬಸವರಾಜ್ ಚಿಲಕಾಂತಮಠ್, ಎಂ.ಮAಜುನಾಥ್, ಹೇಮಂತ್ ಕುಮಾರ್, ಪ್ಲೂಡರ್ ಬೈಲೋ, ಕೆ.ವೆಂಕಟೇಶ್, ಕೆ.ವಿ.ನಾರಾಯಣಸ್ವಾಮಿ, ರಹೀಂ ಷರೀಫ್, ಯೋಗೇಂದ್ರಯ್ಯ, ಕೆ.ವಿ.ಯುವರಾಣಿ, ಎಸ್.ವೆಂಕಟಸ್ವಾಮಿ, ಜಿ.ಕೆ.ಶಶಿಕಲಾ, ಬಿ.ಎ.ಕಾವ್ಯಶ್ರೀ, ಸಂಪತ್ ಕುಮಾರ್, ಜಿ.ಮುನಿಯಪ್ಪ, ಎಸ್.ನಯಾಜ್ ಪಾಷ, ಎಸ್.ಸುಧಾಮಣಿ, ಜಿ.ಸುಜಾತಾ, ಸಂತೋಷ್ ಕುಮಾರ್, ಸುರೇಂದ್ರ ಮತ್ತಿತರರಿದ್ದರು.

ಚಿತ್ರ ೧೮ ಕೆ.ಎಲ್.ಆರ್. ೦೯ : ಕೋಲಾರದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾದೈಹಿಕ ಶಿಕ್ಷಣ ಶಿಕ್ಷಕರ ಸಂಘದಿAದ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net