

ಕಳಸ: ನಮ್ಮಲ್ಲಿ ಎಷ್ಟೇ ಸಂಪತ್ತು ಇದ್ದರೂ ದೇಶಾಭಿಮಾನ ಬೆಳೆಸಿಕೊಳ್ಳದಿದ್ದರೆ ಆ ಸಂಪತ್ತು ಪರಕೀಯರ ಪಾಲಾಗಬಹುದು ಎಂದು ನಿವೃತ್ತ ಯೋಧ ಎಂ.ಡಿ.ಉಮೇಶ್ ಹೇಳಿದರು.
್ರೆಂಡ್ಸ್ ಕಳಸ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಆಗ ನಾವು ನಮ್ಮ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ. ದೇಶ ಇದ್ದರೆ ಮಾತ್ರ ನಾವು ಸ್ವತಂತ್ರವಾಗಿ ಜೀವಿಸಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ದೇಶಾಭಿಮಾನ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯ ಎಂದು ಹೇಳಿದರು.
ಜೆಸಿಐ ಅಧ್ಯಕ್ಷ ಸುಧಾಕರ್ ಮಾತನಾಡಿ, ನಾವು ಇಲ್ಲಿ ನೆಮ್ಮದಿಯ ಜೀವನ ಮಾಡುತ್ತಿದ್ದೇವೆ ಎಂದರೆ ಅದು ಈ ದೇಶವನ್ನು ಕಾಯುತ್ತಿರುವ ಸೈನಿಕರಿಂದ. ಅದೆಷ್ಟೋ ಸೈನಿಕರು ನಮಗೋಸ್ಕರ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಅವರನ್ನು ನೆನೆಪಿಸಿಕೊಂಡು ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಯೋಧ ರಾಜಪ್ಪ ಹಾಗೂ ನಿವೃತ್ತ ಯೋಧ ಉಮೇಶ್ ಎಂ.ಡಿ. ಮುಗ್ರಳ್ಳಿ ಅವರನ್ನು ಗೌರವಿಸಲಾಯಿತು.
ಮಳೆಯ ನಡುವೆ ಕಳಸ ಪ್ರಮುಖ ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು. ಕಳಸ ್ರೆಂಡ್ಸ್ ಅಧ್ಯಕ್ಷ ಮಾರುತೇಶ್, ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಕಳಸ ರೋಟರಿ ಕ್ಲಬ್ ಅಧ್ಯಕ್ಷ ಮಹೇಂದ್ರ, ಆಟೋ ಚಾಲಕ ಮಾಲಿಕರ ಸಂಘದ ಅಧ್ಯಕ್ಷ ಜಗದೀಶ್ ಭಟ್, ಕಳಸ ಗ್ರಾಪಂ ಉಪಾಧ್ಯಕ್ಷ ಕೆ.ಕೆ.ಭಾಸ್ಕರ್ ಇತರರಿದ್ದರು.