ದೇಶದಲ್ಲಿ ಹಾನಿಗಳ ಮೇಲೆ ಹಾನಿ ಆದೀತಲೆ ಎಚ್ಚರ..,  ಆನೆಕೊಂಡ ಬಸವೇಶ್ವರ ಕಾರ್ಣೀಕ

dvg-anekonda-karnika-aug-22.jpg
Published on
ದಾವಣಗೆರೆ : ರಾಮ ರಾಮ ಎಂದೀತಲೆ, ಶೃಂಗಾರದ ಗಿಳಿಗೆ ಮಹಾತಾಯಿ ಆಶೀರ್ವಾದ ಮಾಡ್ಯಾಳಲೆ, ನರಲೋಕದ ಜನಕೆ ಆನೆ ಮುತ್ತಿನುಂಡೆ ಕೊಟ್ಯಾಳಲೆ, ದೇಶದ ಮೇಲೆ ಹಾನಿಗಳ ಮೇಲೆ ಹಾನಿ ಆದೀತಲೆ ಎಚ್ಚರ.. ಆನೆಕೊಂಡದ ಮರಡಿ ಬಸವೇಶ್ವರ ದೇವಸ್ಥಾನ ಎದುರು ಸೋಮವಾರ ಸಂಜೆ ಪದ್ಧತಿಯಂತೆ ಜರುಗಿದ ಬಸವೇಶ್ವರ, ನೀಲಾನಹಳ್ಳಿಯ ಆಂಜನೇಯ ಸ್ವಾಮಿಯ ಕಾರ್ಣೀಕವಿದು. ಬಾತಿ ಸಮೀಪದ ನೀಲಾನಹಳ್ಳಿಯ ಆಂಜನೇಯ ಸ್ವಾಮಿಯೊಂದಿಗೆ ಸಂಜೆ ಕುದುರೆ ಮೆರವಣಿಗೆ ಮೇಲೆ, ನಿಟುವಳ್ಳಿ ದುರ್ಗಾಂಬಿಕೆ, ಬೇತೂರು ರಸ್ತೆಯ ವೆಂಕಟೇಶ್ವರ ಸ್ವಾಮಿ ಒಳಗೊಂಡು ಸುತ್ತಮುತ್ತಲ ದೇವರನ್ನು ಕರೆ ತರಲಾಯಿತು. ಪದ್ಧತಿಯಂತೆ ಆನೆಕೊಂಡದ ಪುರಾತನ ಬಾವಿಯಲ್ಲಿ ಸ್ನಾನ ಮಾಡಿ, ದೇವಸ್ಥಾನ ಬಳಿ ಸಿದ್ಧಗೊಂಡ ವೇದಿಕೆಯಲ್ಲಿ ದಾಸಪ್ಪನವರು ಈ ಕಾರ್ಣೀಕ ನುಡಿದಾಗ ನೆರೆದಿದ್ದ ನೂರಾರು ಭಕ್ತರು ಕಣ್ತುಂಬಿಕೊಂಡರು. ದೇವರಿಗೆ ಹಣ್ಣು-ಕಾಯಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net