ದೇಶದ ಶೇ.30 ಮಹಿಳೆಯರಿಗೆ ಸ್ತನ ಕ್ಯಾನ್ಸರ್

ದೇಶದ ಶೇ.30 ಮಹಿಳೆಯರಿಗೆ ಸ್ತನ ಕ್ಯಾನ್ಸರ್
Health Care
Published on

ಕ್ಯಾನ್ಸರ್ ಪೀಡಿತ ಭಾರತೀಯ ಮಹಿಳೆಯರಲ್ಲಿ ಶೇ.30 ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದಲೇ ಬಳಲುತ್ತಿರುವವರಾಗಿದ್ದು, ಆರಂಭದಲ್ಲಿಯೇ ಅಥವಾ ಮುನ್ನೆಚ್ಚರಿಕೆಯಾಗಿ ಸಾಮಾನ್ಯ ಮಹಿಳೆಯರೂ ಆರೋಗ್ಯ ತಪಾಸಣೆಗೆ ಒಳಗಾದರೆ ಚಿಕಿತ್ಸೆ ಸುಲಭವಾಗುತ್ತದೆ. ಹೀಗಾಗಿ ಈ ಬಗ್ಗೆ ಮಹಿಳೆಯರು ಗಮನಹರಿಸಬೇಕೆಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಎಂ.ವಿಜಯಕುಮಾರ್ ಸಲಹೆ ನೀಡಿದರು.

ಕುಟುಂಬದ ಹಿನ್ನೆಲೆ ಮತ್ತು ಅನುವಂಶಿಕ ಪ್ರವೃತ್ತಿಗಳು ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳಬಹುದಾಗಿದೆ. ಸ್ತೂಲ ಕಾಯ, ತಡವಾಗಿ ಮಗು ಜನಿಸುವುದು, ಕಡಿಮೆ ಹಾಲುಣಿಸುವಿಕೆ, ಬದಲಾದ ಆಹಾರ ಪದ್ಧತಿಗಳೂ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದಾಗಿವೆ. ಹೀಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಗುಣವಾಗುವ ಪ್ರಮಾಣ ಹೆಚ್ಚಿಸಿಕೊಳ್ಳಬಹುದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಿಳೆಯರು ಸ್ತನದಲ್ಲಿ ಗಂಟು ಕಾಣಿಸಿಕೊಂಡಾಗ ಹಾಲುಗಂಟು ಎಂದು ನಿರ್ಲಕ್ಷಿಸುವುದು ಬೇಡ, ಸ್ಕ್ಯಾನಿಂಗ್ ಮೊದಲಾದ ತಪಾಸಣೆಗೆ ಒಳಗಾಗುವುದು ಸೂಕ್ತ. ಜತೆಗೆ, ವೈದ್ಯಕೀಯ ಪದ್ಧತಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಕಡಿಮೆ ವೆಚ್ಚದಲ್ಲಿಯೇ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿದೆ. ಹೀಗಾಗಿ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಡಾ.ಕೆ.ಜಿ.ಶ್ರೀನಿವಾಸ್, ಆನಂದ್, ಗೌತಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net