ದೇಶದ ಪಿಎಂ ರೈತಪರ ಇದ್ದಾರೆ

CTD 28 Pm---06
Published on


ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಪರವಿದ್ದಾರೆ. ಇದಕ್ಕೆ ಅವರು ಜಾರಿಗೆ ತಂದ ಅನೇಕ ಯೋಜನೆಗಳೇ ಸಾಕ್ಷಿ ಎಂದು ಎಂಎಲ್ಸಿ ಕೆ.ಎಸ್.ನವೀನ್ ಹೇಳಿದರು.

ಎಪಿಎಂಸಿ ಆವರಣದ ಎಸ್.ರಾಮರೆಡ್ಡಿ ಬಿ.ಎಂ.ಶಿವಮೂರ್ತಪ್ಪ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ಗುರುವಾರ ಪಿಎಂಕೆಎಸ್‌ಕೆ, ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಜರ್ ಕಂಪನಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಧಾನಿ ಅವರು ದೇಶದ ರೈತರಿಗಾಗಿ 1.25 ಲಕ್ಷ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಪಿಎಂ ಕಿಸಾನ್ ನಿಧಿಯ 14ನೇ ಕಂತಿಗಾಗಿ 17.5ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದು, 8.5 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ ಎಂದು ವಿವರಿಸಿದರು.

ಗಂಧಕ ಲೇಪಿತ ಯೂರಿಯಾವನ್ನು (ಯೂರಿಯ ಗೋಲ್ಡ್) ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮೋದಿ ಅವರ ಕೆಲಸಗಳು ಕಣ್ಣಿಗೆ ಕಾಣುತ್ತಿವೆ ಎಂದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ಎಂಸಿಎಫ್‌ನ ಕ್ಷೇತ್ರ ವ್ಯವಸ್ಥಾಪಕ ಅಮರನಾಥ ರೆಡ್ಡಿ, ಕೃಷಿ ಅಧಿಕಾರಿ ಪ್ರಭಾಕರ, ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ರಸಗೊಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ, ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ, ಎಂಸಿಎಫ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಕೆ.ಪಿ.ಪ್ರಸನ್ನ, ಎಂ.ಜೆ.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net