

ಸಂಕೇಶ್ವರ: ದೇಶದ ಪ್ರತಿಯೊಬ್ಬ ನಾಗರಿಕ ಪರಿಪಾಲಿಸುವ ಗ್ರಂಥ ಸಂವಿಧಾನವಾಗಿದ್ದು, ದೇಶದ ಕಾನೂನು ಗೌರವಿಸಿದರೆ ಅಂಬೇಡ್ಕರ್‌ರಿಗೆ ನಿಜವಾದ ನಮನ ಸಲ್ಲಿಸಿದಂತಾಗುತ್ತದೆ ಎಂದು ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಸಿ. ಕಮತೆ ಹೇಳಿದರು.
ಸಮೀಪದ ನಿಡಸೋಸಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎನ್‌ಎಸ್‌ಎಸ್ ಘಟಕದ ಮುಖ್ಯಸ್ಥ ಪ್ರೊ.ಎಸ್.ಎಸ್. ಪಾಟೀಲ, ಪ್ರೊ.ಮಹೇಶ ಹಿಪ್ಪರಗಿ, ಶಿವಾನಂದ ಸಾರವಾಡಿ ಇತರರಿದ್ದರು.