ದೇಶ ಪ್ರಗತಿ ಹೊಂದಲು ಶಿಕ್ಷಣ ಅಗತ್ಯ

24HDK1
ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರು ಭಾಗವಹಿಸಿದ್ದರು.
Published on

ಶಾಸಕ ಅನಿಲ್ ಚಿಕ್ಕಮಾದು ಅಭಿಮತ


ಎಚ್.ಡಿ.ಕೋಟೆ: ಶಿಕ್ಷಣದಿಂದ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.


ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಬ್ಬ ವ್ಯಕ್ತಿ ಉತ್ತಮ ಸಾಧನೆ ಮಾಡಬೇಕಾದರೆ ಶಿಕ್ಷಣ ಅಗತ್ಯ. ಹಾಗಾಗಿ ಯಾವುದೇ ಸರ್ಕಾರ ಆಡಳಿತ ಬಂದಾಗ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದ ಅವರು, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ನಮ್ಮ ರಾಜ್ಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದೆ ಎಂದರು.


ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಮಾಡಿರುವ ಮಾನದಂಡ ಸಡಿಲಿಕೆ ಮಾಡಿದರೆ ಉತ್ತಮ. ಇದರಿಂದ ಆರೋಗ್ಯ ಮತ್ತು ಇತರ ಸಮಸ್ಯೆಗಳಲ್ಲಿರುವ ಶಿಕ್ಷಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.


ಪಟ್ಟಣದ ಗುರು ಭವನ ಹಳೆಯದಾಗಿದ್ದು, ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ನೂತನವಾಗಿ ಶಿಕ್ಷಕರ ಭವನ ನಿರ್ಮಾಣ ಮಾಡಲು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.


ಉಪನ್ಯಾಸಕ ಜಯರಾಮ್ ಮಾತನಾಡಿದರು. ತಾಲೂಕಿನಲ್ಲಿ ಹಲವು ವರ್ಷಗಳಿಂದ ಸೇವೆ ಮಾಡಿ ನಿವೃತ್ತಿಗೊಂಡ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ಅನಿತಾ ನಿಂಗನಾಯಕ, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಉಪಾಧ್ಯಕ್ಷೆ ವಿನಾಯಕ ಪ್ರಸಾದ್, ಪುರಸಭೆ ಸದಸ್ಯರಾದ ಸುಹಾಸಿನಿ ದಿನೇಶ್, ಎಚ್.ಸಿ.ನರಸಿಂಹಮೂರ್ತಿ, ತಾಲೂಕು ಸ.ನೌ.ಸಂಘದ ಅಧ್ಯಕ್ಷೆ ಎ.ಎಸ್.ಮಹದೇವ, ಎಂ.ಚಂದ್ರಕುಮಾರ್, ಡಿ.ಎಂ.ಮಹದೇವಸ್ವಾಮಿ, ಭೀಮಪ್ಪ ಮಲ್ಲಪ್ಪ, ಎನ್.ಆನಂದ್, ಸೋಮಸುಂದರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net