ದೇವೇಗೌಡರ ಜತೆ ಕೆಲಸ ಮಾಡುವುದು ಪುಣ್ಯ

14ark3
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎ. ಮಂಜು ಉದ್ಘಾಟಿಸಿದರು. ಕೆ. ಸತೀಶ್, ಸುರೇಶ್ ಸಿಂಗನಕುಪ್ಪೆ, ಯೋಗೇಶ್, ಇತರರಿದ್ದರು.
Published on

ಅರಕಲಗೂಡು: ರಾಜಕೀಯವಾಗಿ ನನಗೆ ಈವರೆಗೆ ಮತದಾರರೇ ಗಾಡ್ ಫಾದರ್ ಆಗಿದ್ದರು. ಈಗ ಎಚ್.ಡಿ. ದೇವೇಗೌಡರು ನನ್ನ ಗಾಡ್‌ಫಾದರ್ ಆಗಿದ್ದು, ಅವರೊಂದಿಗೆ ಕೆಲಸ ಮಾಡುವ ಪುಣ್ಯ ಲಭಿಸಿದ್ದು ಮತದಾರರು ಚುನಾವಣೆಯಲ್ಲಿ ಆಶೀರ್ವದಿಸಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ನನ್ನ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಈ ಬಗ್ಗೆ ಜನರು ಯಾರ ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎನ್ನುವ ಕುರಿತು ಪರ ವಿರೋಧದ ಚರ್ಚೆ ಮಾಡಿ ಉತ್ತಮರನ್ನು ಆಯ್ಕೆ ಮಾಡಬೇಕು ಎಂದರು.
ಮಾ. 16ರಂದು ತಾಲೂಕಿಗೆ ಆಗಮಿಸುವ ಪಂಚರತ್ನ ರಥಯಾತ್ರೆ ವೇಳೆ 30 ಸಾವಿರ ಜನ ಸೇರಿ ಇತಿಹಾಸ ನಿರ್ಮಿಸಬೇಕು. ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಮಕ್ಕಳು ಸಿಗದೆ ವಯೋಮಾನ ಮೀರಿ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ರೈತರ ಮಕ್ಕಳ ಮದುವೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕಿದೆ ಎಂದರು.
ಜೆಡಿಎಸ್ ಮುಖಂಡ ಸುರೇಶ್ ಸಿಂಗನಕುಪ್ಪೆ ಮಾತನಾಡಿ, ಶಾಸಕ ಎ.ಟಿ. ರಾಮಸ್ವಾಮಿ ಅವರಿಗೆ ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರನ್ನು ಮಾತನಾಡಿಸುವ ಸೌಜನ್ಯ ಕೂಡ ಇಲ್ಲ. ಪ್ರಾಮಾಣಿಕ, ಸತ್ಯವಂತ ಎಂದುಕೊಳ್ಳುವ ಶಾಸಕರು ಅರಸೀಕಟ್ಟೆ ಅಮ್ಮ ದೇವಸ್ಥಾನದಲ್ಲಿ ಟ್ರಸ್ಟ್ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ದೇವಸ್ಥಾನ ಸನ್ನಿಧಿಯಲ್ಲಿ ಅನಾಚಾರಗಳನ್ನು ನಡೆಸಲು ಕುಮ್ಮಕ್ಕು ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅಧಿಕಾರಿಗಳನ್ನು ಹೆದರಿಸಿ ಕಮಿಷನ್ ಪಡೆದಿದ್ದಾರೆ. ಸಮಿತಿ ಟ್ರಸ್ಟ್ ನಲ್ಲಿ ಭ್ರಷ್ಟಾಚಾರ ನಡೆಸಿಲ್ಲ ಎಂದು ಶಾಸಕರು ದಿನಾಂಕ ನಿಗದಿಪಡಿಸಿದರೆ ಅಣೆ ಪ್ರಮಾಣ ಮಾಡಲು ಸಿದ್ದವಿರುವುದಾಗಿ ಸವಾಲು ಹಾಕಿದರು.
ಎ. ಮಂಜು ಅವರು ಜೆಡಿಎಸ್ ಸೇರಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದ್ದು, ಜಿಲ್ಲೆಯ ಅಭಿವೃದ್ಧಿಗೆ ಎಚ್.ಡಿ. ರೇವಣ್ಣ ಮತ್ತು ಎ. ಮಂಜು ಅವರು ಜೋಡೆತ್ತುಗಳಾಗಿ ಕೆಲಸ ಮಾಡಲಿದ್ದಾರೆ. ಕಾರ್ಯಕರ್ತರು ಇವರ ಕೈ ಬಲಪಡಿಸಬೇಕು ಎಂದು ಹೇಳಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಸತೀಶ್, ಮುಖಂಡರಾದ ಮುದ್ದನಹಳ್ಳಿ ರಮೇಶ್ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಮುಖಂಡರಾದ ಮಾಗೋಡು ಬಸವರಾಜು, ದಿವಾಕರ್, ರವಿ, ಚಂದ್ರು, ರಾಜು, ದೊರೆಸ್ವಾಮಿ, ಮನ್ಸೂರ್ ನರಸೇಗೌಡ ಇತರರಿದ್ದರು.

14ಎಆರ್‌ಕೆ3..
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಎ. ಮಂಜು ಉದ್ಘಾಟಿಸಿದರು. ಕೆ. ಸತೀಶ್, ಸುರೇಶ್ ಸಿಂಗನಕುಪ್ಪೆ, ಯೋಗೇಶ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net