ದೇವಸ್ಥಾನಕ್ಕೆ 50 ಸಾವಿರ ರೂ. ಧನಸಹಾಯ

27 nrp 3 darmastala
ಎನ್.ಆರ್.ಪುರದ ರಾವೂರು ಗುಳ್ಳೆ ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮಂಜೂರಾದ 50 ಸಾವಿರ ರೂ. ಚೆಕ್‌ನ್ನು ಗುಂಡಪ್ಪ ಅವರಿಗೆ ಯೋಜನಾಧಿಕಾರಿ ಎಂ.ಆರ್.ನಿರಂಜನ್ ಹಸ್ತಾಂತರಿಸಿದರು. ಸಿದ್ದಲಿಂಗಪ್ಪ, ಗುಂಡಪ್ಪ, ರಮೇಶ್ ಶೆಟ್ಟಿ, ಶಿವಕುಮಾರ್ ಇದ್ದರು.
Published on

ಎನ್.ಆರ್.ಪುರ: ರಾಜ್ಯದ 11ಸಾವಿರ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಧನಸಹಾಯ ಮಾಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ ತಾಲೂಕು ಯೋಜನಾಧಿಕಾರಿ ಎಂ.ಆರ್.ನಿರಂಜನ್ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಾಲೂಕಿನ ರಾವೂರು ಗ್ರಾಮದ ಗುಳ್ಳ ಮಾರಮ್ಮ ದೇವಸ್ಥಾನಕ್ಕೆ ಮಂಜೂರಾದ 50 ಸಾವಿರ ರೂ. ಡಿಡಿಯನ್ನು ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಗುಂಡಪ್ಪ ಅವರಿಗೆ ಭಾನುವಾರ ಹಸ್ತಾಂತರಿಸಿ ಮಾತನಾಡಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ಧಾರ್ಮಿಕ ಶೃದ್ಧಾಕೇಂದ್ರಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ. ಧರ್ಮಸ್ಥಳದಿಂದ ನೀಡಿದ ಸಹಾಯಧನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ದೇವಸ್ಥಾನ ನಿರ್ಮಾಣ ಮಾಡಿ ಎಂದರು. ಒಕ್ಕೂಟದ ಅಧ್ಯಕ್ಷ ರಮೇಶ ಶೆಟ್ಟಿ, ತಾಲೂಕು ಕೃಷಿ ಮೇಲ್ವಿಚಾರಕ ಶಿವಕುಮಾರ್, ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ದೇವಸ್ಥಾನದ ಸಮಿತಿ ಸದಸ್ಯರಾದ ರಘು, ಗಿರೀಶ, ಸಂದೀಪ, ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net