ದೇವರೇ ನಮ್ಮನ್ನು ಕಾಪಾಡ ಬೇಕೆಂದ ಶಾಸಕ

IMG_20201216_125954.jpg nn
Published on

ಚಿತ್ರದುರ್ಗ:ನಗರದಲ್ಲಿ ಬುಧವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಕುಡಿವ ನೀರು,ಸ್ವಚ್ಛತೆ,ಬೀದಿ ದೀಪದಂಥ ಹತ್ತಾರು ಮೂಲ ಸೌಕರ್ಯಗಳನ್ನು ಪ್ರಸ್ತಾಪಿಸಿದ ಸದಸ್ಯರು ಜಡ್ಡುಗಟ್ಟಿದ್ದ ಅಧಿಕಾರಿ-ಸಿಬ್ಬಂದಿ ವರ್ಗಕ್ಕೆ ಬಿಸಿ ಮುಟ್ಟಿಸಿದರು. ತಮ್ಮ ಪಕ್ಷದ ಸದಸ್ಯರೇ ಅಧಿಕವಿರುವ ಸಭೆಯಲ್ಲಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸಮಸ್ಯೆಗಳ ಪರಿಹಾರ ಕುರಿತು ಸಲಹೆ, ಸೂಚನೆಗಳನ್ನು ಕೊಟ್ಟರು.
ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವು ಸದಸ್ಯರಿಂದ ಪ್ರಶಂಸೆಯ ಮಾತುಗಳು ಕೇಳಿ ಬಂದವು. ಕೌನ್ಸಿಲ್ ಇಲ್ಲವೆಂದು ಅಧಿಕಾರಿ-ಸಿಬ್ಬಂದಿ ಉದಾಸೀನವಾಗಿರ ಬಹುದು. ಆದ್ದರಿಂದ ಸಮಸ್ಯೆಗಳನ್ನು ಬಗೆಹರಿಸಲು ಪ್ರತಿ ವಾರ್ಡ್‌ನಲ್ಲೂ ಒಂದು ವಾರ ಅಥವಾ 15ದಿನಗಳಿಗೊಮ್ಮೆ ವಾರ್ಡ್ ಸಭೆ ಮಾಡೋಣವೆಂಬ ಶಾಸಕರ ಸಲಹೆಯನ್ನು ಸಭೆ ಸಮ್ಮತಿಸಿತು. ಒಳಚರಂಡಿ ಸಂಪರ್ಕ ಕಲ್ಪಿಸದ ನಂತರ ನಮ್ಮನ್ನು ದೇವರೇ ಕಾಪಾಡ ಬೇಕೆಂದು ಅ ದರ ಕಾಮಗಾರಿ ಗುಣಮಟ್ಟದ ಬಗ್ಗೆ ಶಾಸಕರು ಆತಂಕ ವ್ಯಕ್ತಪಡಿಸಿದರು. ಒಳಚರಂಡಿ ಕಾಮಗಾರಿ ಕಳಪೆಯಾಗಿರುವುದಾಗಿ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಕುಡಿವ ನೀರಿನ ಸಂಪರ್ಕಕ್ಕೆ ಕಡ್ಡಾಯವಾಗಿ ಮಿಟರ್ ಅಳವಡಿಸ ಬೇಕು. ಬೇಸಿಗೆ ಸಮೀಪಿಸುವುದರೊಳಗೆ ಮೋಟಾರ್ ಮತ್ತಿತರ ವ್ಯವಸ್ಥೆ ಸರಿಪಡಿಸ ಬೇಕೆಂದ ಅವರು,ಪೌರಕಾರ್ಮಿಕರ ಖಾಲಿ ಇದ್ದರೆ ಭರ್ತಿಗೆ ಯಾವುದಾದರೂ ದಾರಿ ಇದ್ದರೆ ತಿಳಿಸಯವಂತೆ ಆಯುಕ್ತ ಜೆ.ಟಿ.ಹನುಮಂತರಾಜು ಅವರಿಗೆ ಸೂಚಿಸಿದರು.
ನಗರದಲ್ಲಿ ಹಂದಿ,ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ ಎಂಬ ದೂರಿಗೆ,15 ದಿನದೊಳಗೆ ನಗರದಲ್ಲಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು,ಹಂದಿಗಳ ನಿಯಂತ್ರಣಕ್ಕೆ ಕ್ರಮ ವಹಿಸುವುದಾಗಿ ಆಯುಕ್ತರು ತಿಳಿಸಿದರು. ಅಧ್ಯಕ್ಷೆ ತಿಪ್ಪಮ್ಮ,ಉಪಾಧ್ಯಕ್ಷೆ ಶ್ವೇತಾ ವಿರೇಶ್ ಹಾಗೂ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net