ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರಿನಲ್ಲಿ ಮುಕ್ಕೋಟಿ ಏಕಾದಶಿಯ ಮಾರನೇ ದಿನವಾದ ಶನಿವಾರ ಮುಕ್ಕೋಟಿ ದ್ವಾದಶಿ ಅಂಗವಾಗಿ ವೈಕುಂಠಪುರವೆAಬ ಖ್ಯಾತಿಗೊಳಗಾದ ರೋಣುರು ಶ್ರೀನಿವಾಸದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ದೇವರ ನೈವೇದ್ಯಕ್ಕೆ ಇಡಲಾಗಿದ್ದ ಲಡ್ಡು ಹರಾಜಿನಲ್ಲಿ ೩೭ ಸಾವಿರಕ್ಕೆ ಮಾರಾಟವಾಯಿತು.
ಮುಕ್ಕೋಟಿ ದ್ವಾದಶಿಯಂದು ಇಲ್ಲಿ ನಡೆಯುವ ಪೂಜೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದು, ಇಡೀ ದಿನ ದೇವಾಲಯದಲ್ಲಿ ಅನ್ನದಾಸೋಹ ನಡೆಯಿತು. ಗ್ರಾಮದ ಮಹಿಳೆಯರೇ ಸಾವಿರಾರು ಮಂದಿಗೆ ಹಬ್ಬದೂಟ ಬಡಿಸಿದ್ದು ಇಲ್ಲಿನ ವಿಶೇಷವಾಗಿತ್ತು.
ಈ ದೇವಾಲಯದ ಸಂಪ್ರದಾಯದAತೆ ಪ್ರತಿ ವರ್ಷ ಮುಕ್ಕೋಟಿ ಏಕಾದಶಿಯಂದು ಲಕ್ಷಿö್ಮÃವೆಂಕಟೇಶ್ವರ ಸ್ವಾಮಿಗೆ ನೈವೇದ್ಯಕ್ಕೆ ಇಡುವ ಲಡ್ಡುವನ್ನು ಹರಾಜು ಹಾಕುವ ಪದ್ದತಿ ರೂಢಿಯಲ್ಲಿದ್ದು, ಈ ಹರಾಜಿನಲ್ಲಿ ಬಂದ ಹಣವನ್ನು ದೇವಾಲಯದ ಅಭಿವೃದ್ದಿಗೆ ಬಳಸಲಾಗುತ್ತದೆ.
ಕಳೆದ ವರ್ಷ ೨೧ ಸಾವಿರಕ್ಕೆ ಮಾರಾಟವಾಗಿದ್ದ ಸ್ವಾಮಿಯ ಪ್ರಸಾದವಾದ ಲಡ್ಡು ಈ ಬಾರಿ ದೇವಾಲಯದ ಪ್ರಾಂಗಣದಲ್ಲಿ ನಡೆದ ಹರಾಜಿನಲ್ಲಿ ೩೭೫೦೦ ರೂಗಳಿಗೆ ಮಾರಾಟವಾಗಿ ಹೊಸ ದಾಖಲೆ ನಿರ್ಮಾಣವಾಯಿತು.
ಕಳೆದ ಬಾರಿ ೨೧ ಸಾವಿರಕ್ಕೆ ಹರಾಜಿನಲ್ಲಿ ಪ್ರಸಾದದ ಲಡ್ಡು ತಮ್ಮದಾಗಿಸಿಕೊಂಡಿದ್ದ ಗ್ರಾಮದ ಯುವಕರಾದ ಅನಿಲ್‌ಕುಮಾರ್, ಅನಿತಾ,ಸೋಮಶೇಖರ್, ಸುಮಂತ್ ಈಬಾರಿ ಹರಾಜಿನಲ್ಲಿ ಭಾಗವಹಿಸಿ ೩೭೫೦೦ ರೂಗಳಿಗೆ ಲಡ್ಡು ತಮ್ಮದಾಗಿಸಿಕೊಂಡರು.
ಶನಿವಾರ ಬೆಳಿಗ್ಗೆ ೮ ಗಂಟೆಗೆ ಗ್ರಾಮದ ರಾಜಬೀದಿಗಳಲ್ಲಿ ದೇವರ ಉತ್ಸವ, ರೋಣೂರು ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಾರಾಯಣ, ಬೆಳಿಗ್ಗೆ ೧೦ ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದಲ್ಲಿ ಮಜರಾಯಿ ತಹಸೀಲ್ದಾರ್ ಬಿ.ಎನ್.ಸುದೀಂದ್ರö, ಅರ್ಚಕ ಆರ್.ಮೋಹನ್ ರಾಜಗೋಪಾಲಭಟ್ಟರ್ ಹಾಗೂ ರೋಣೂರು ಗ್ರಾ.ಪಂ ಸದಸ್ಯರಾದ ರಾಧಮ್ಮ ನಟರಾಜು, ಮಂಜುನಾಥ್, ರೋಣೂರು ಗ್ರಾಮದ ಮುಖಂಡರಾದ ಆರ್.ಎಂ.ಶ್ರೀರಾಮುಲು, ಆರ್.ಬಿ.ರಾಮಚಂದ್ರ, ಆರ್.ಪಿ. ಆನಂದ್, ಚಂದ್ರಶೇಖರ್, ಆರ್.ವಿ.ಶ್ರೀರಾಮರೆಡ್ಡಿ, ಆರ್.ಆರ್.ವೆಂಕಟರಮಣ, ಆರ್.ವಿ.ರೆಡ್ಡೆಪ್ಪ, ಆರ್.ಎನ್.ವೆಂಕಟರೆಡ್ಡಿ, ರವಿ ಮತ್ತಿತರರು ಪಾಲ್ಗೊಂಡಿದ್ದರು.
ಚಿತ್ರ ೧೧ ಕೆ.ಎಲ್.ಆರ್. ೦೫ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಣೂರು ವೈಕುಂಠಪುರದಲ್ಲಿ ಅರ್ಜುನ ಪ್ರತಿಷ್ಠಾಪಿತ ಶ್ರೀ ಲಕ್ಷಿ÷್ಮÃ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ದ್ವಾದಶಿ ಅಂಗವಾಗಿ ಸ್ವಾಮಿಗೆ ನೈವೇದ್ಯಕ್ಕೆ ಇಟ್ಟಿದ್ದ ಲಡ್ಡು ಹರಾಜಿನಲ್ಲಿ ೩೭೫೦೦ ರೂಗೆ ತಮ್ಮದಾಗಿಸಿಕೊಂಡ ಗ್ರಾಮದ ಯುವಕರಿಗೆ ಲಡ್ಡು ಹಸ್ತಂತರಿಸಲಾಯಿತು.